Thursday, July 15, 2010

ಹಕ್ಕಿಗಳ ಫೋಟೋಗ್ರಫಿ ಅನುಭವ.....


(ಒರಿಸ್ಸಾ ಪ್ರವಾಸದ ಕೊನೆಯ ಬಾಗ ವನ್ನು ಮುಂದಿನ ಸಾರಿ ಹಾಕುತ್ತೇನೆ,,, ಪುರಿ ದೇವಸ್ತಾನದ ಬಗ್ಗೆ,, ಹಾಗು ಚಿಲಕ lake ಬಗ್ಗೆ ಹೇಳಬೇಕಿದೆ,,, ಆದರೆ ಚಿಲಕ lake ಬಗ್ಗೆ ಸ್ವಲ್ಪ ಮಾಹಿತಿ ಪಡೆದು,, ಅಪ್ಡೇಟ್ ಮಾಡುತ್ತೇನೆ,,,,)

ಇಂದಿನ ಲೇಖನದಲ್ಲಿ,,,, ಈ ವಾರ ಹಕ್ಕಿಗಳ ಫೋಟೋ ತೆಗೆಯಲು ಹೋದಾಗ ಆದ ಅನುಭವದ ಬಗ್ಗೆ ಹಂಚಿಕೊಳ್ಳುತ್ತಿದೇನೆ...
ಚಿಟ್ಟೆ ಮತ್ತೆ, ಹುಳ ಹುಪ್ಪಟೆಗಳ ಫೋಟೋ ಗ್ರಫಿ ನಂತರ ಎರಡು ವಾರ ಎಲ್ಲೂ ಹೋಗಲು ಆಗಿರಲಿಲ್ಲ... ಕಳೆದ ಶನಿವಾರ ಬಿಡುವಾಗಿತ್ತು.... ಸರಿ ಅಂತ ನನ್ನ ಕಸಿನ್ ಕೃಷ್ಣ ಮತ್ತೆ ಫ್ರೆಂಡ್ ರಮೇಶ್ ಜೊತೆ,, ಎಲ್ಲಿಗಾದ್ರೂ ಹೋಗಿ ಬರೋಣ ಅಂತ,, ಅನ್ಕೊಂದ್ವಿ,, ಮನೆ ಇಂದ ಹೊರಡೋದೇ ಲೇಟ್ ಆಗಿ ಬಿಟ್ ಇತ್ತು ,, ಸರಿ ಎಲ್ಲಿ ಹೋಗೋದು ಅಂತ ಯೋಚನೆ ಮಾಡ್ತಾ,,, ಈ ಸರಿ ಹಕ್ಕಿ ಗಳ ಫೋಟೋ ತೆಗೆಯಲು ಹೋಗೋಣ, ಒಂದು ಕೆರೆ ಹತ್ರ ಅಂತ ಅನ್ಕೊಂಡು ಹೊರಟ್ವಿ,,,

ಅ ಕೆರೆ ಇರೋದು ತಾವರೆಕೆರೆ ಬಿಟ್ಟು ಮುಂದೆ,,, ಸೂಲಿ ಕೆರೆ ಅಂತ ಅದರ ಹೆಸರು,,,, ನಮ್ಮ ಮನೆ ಇಂದ ಒಂದು ೧೨ KM ಆಗುತ್ತೆ,,, ಹೋಗ್ತಾ ದಾರಿನಲ್ಲಿ,, ನೈಸ್ ರೋಡ್ ದಾಟಿಕೊಂಡು ಹೋಗಬೇಕು,,, ಹಾಗೆ ಅಲ್ಲಿ ಸ್ವಲ್ಪ ಹೊತ್ತು ಅದು ಇದು ಫೋಟೋ ತೆಗೆದು ಕೊಂಡು,,, ದಾರಿ ನಲ್ಲಿ ಸಿಗುವ ಹೊಲ ತೋಟ ಗಳ,,, fresh ಗಾಳಿ ಕುಡ್ಕೊಂಡು ಸೂಲಿ ಕೆರೆ reach ಅಗೋ ಅಸ್ಟು ಹೊತ್ತಿಗೆ,, ೮:೦೦ ಘಂಟೆ ಆಗಿತ್ತು,,, ಅದರೂ ಡೌಟ್ ನಿಂದಲೇ ಹೋದ್ವಿ,, ಯಾವುದಾದರು ಹಕ್ಕಿ ಗಳು ಸಿಗುತ್ತೇನೋ ಅಂತ,,, ನಮ್ಮ ಅದೃಷ್ಟ ಚೆನ್ನಾಗಿ ಇತ್ತು,,, ಹಕ್ಕಿ ಗಳು ಕೆರೆ ತುಂಬಾ ಇದ್ದವು,,,, egret ಮತ್ತೆ Open Billed Stork (ಹೆಸರು ಅಸ್ಟಾಗಿ ಗೊತ್ತಿಲ್ಲ ) , ಹಕ್ಕಿಗಳು ತುಂಬಾ ಸಿಕ್ಕವು , ಆದರೆ ನಾನು ಅಂದುಕೊಂಡಂತೆ,,, ಫೋಟೋಗಳನ್ನು ತೆಗೆಯ ಲಾಗಲಿಲ್ಲ ,,, ಕಾರಣ,, ನನ್ನ ಹತ್ತಿರ,, SLR ಕ್ಯಾಮೆರಾ ಇರಲಿಲ್ಲ,,, ನನ್ ಹತ್ರ ಇದ್ದದ್ದು,,, 12X zoom ನ, Higher end normal Digital ಕ್ಯಾಮೆರಾ.... ಅದರಲ್ಲೇ ಕೆಲವೊಂದು,,, ಫೋಟೋಗಳನ್ನು ತೆಗೆದೆ
....ಇನ್ನು ಕಲಿತ ಇರೋದು ಅಲ್ವ,, ಇರಲಿ ಅಂತ....

ಒಟ್ಟಿನಲ್ಲಿ... ಇದು ಒಂದು ತರ ಒಳ್ಳೆಯ ಅನುಭವ,,,, ನಿದಾನಕ್ಕೆ ಕೆರೆಯ ಮದ್ಯ ನೀರು ಇಲ್ಲದೆ ಇರುವ ಜಾಗದಲ್ಲಿ,,, ನಡೆದುಕೊಂಡು ಹಕ್ಕಿಗಳ ಹತ್ರ ಹೋಗೋದು,,, ಒಂದು ಚೂರು ಶಬ್ದ ಮಾಡದೆ,,,, ಒಂದೊಂದೇ ಹಜ್ಜೆ ಇಟ್ಟು ಅವುಗಳನ್ನು focuse ಮಾಡಿ ಫೋಟೋ ತೆಗೆಯುವುದು,,, ವೌ,,, ಒಟ್ಟಿನಲ್ಲಿ ಲಾಸ್ಟ್ saturday ಚೆನ್ನಾಗಿ enjoye   ಮಾಡಿದೆ....

ಅದರ ಕೆಲವು ಫೋಟೋಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ,,, ನೋಡಿ ತಮ್ಮ ಅಭಿಪ್ರಾಯ ತಿಳಿಸಿ....

ಹಾಗೆ ಎಲ್ಲ ಫೋಟೋ ಗಳನ್ನು ನನ್ನ ಪಿಕಾಸ ಆಲ್ಬಮ್ ನಲ್ಲಿ ಹಾಕಿದ್ದೇನೆ... ನೋಡಲು ಇಲ್ಲಿ ಕ್ಲಿಕ್ ಮಾಡಿ......



ನೈಸ್ ರೋಡ್.....

ದಾರಿ ಮದ್ಯ ಸಿಕ್ಕ ಒಂದು ತೋಟ...

ಸೂಲಿ ಕೆರೆ ಇದರ ಹತ್ರನೇ ಹಕ್ಕಿಗಳ ಫೋಟೋ ತೆಗೆದದ್ದು...

egrate ....  
ಮೀನು ಹಿಡಿಯಲು ಹೊಂಚು ಹಾಕ್ತಾ ಇದೆ.....


ಕೊನೆಗೂ ಸಿಕ್ಕ ಮೀನು.....!!!!




Open Billed Stork ಹಕ್ಕಿಗಳ ಗುಂಪು..