ಎಸ್ಟೋ ದಿನಗಳ ಬಳಿಕ.... ಈ ವೀಕ್ ಎಂಡ್ ಫ್ರೀ ಆಗಿ ಇದ್ದೆ.... ಸರಿ...ಎಲ್ಲಿಗಾದ್ರೂ ಫ್ರೀ ಆಗಿ ಹೋಗಿ ಬರೋಣ ಅಂತ ಅನ್ಕೊತ ಇದ್ದೆ.... ಅದಕ್ಕೆ ಸರಿಯಾಗಿ,,, ನನ್ ಕಸಿನ್ ಕೃಷ್ಣ ಕಾಲ್ ಮಾಡಿದ,,, "ಅಣ್ಣ ನಾಳೆ ಫ್ರೀ ಇದ್ರೆ ಬೆಳಿಗ್ಗೆ ಫೋಟೋಗ್ರಫಿ ಮಾಡೋಕೆ ಹೋಗೋಣ ಅಂತ ಅಂದ " ನಂಗು ಅದೇ ಬೇಕಾಗಿತ್ತು , ಸರಿ ಕಣೋ ಅಂತ ಹೇಳಿದೆ... ಅವನು ಹೇಗೂ ನನ್ ಮನೆ ಹತ್ರನೇ ಇರೋದು... ಸರಿ ಶನಿವಾರ ಬೆಳಿಗ್ಗೆ 6 ಗೆ ಹೋಗಬೇಕು ಅಂತ ಶುಕ್ರವಾರನೇ ಮಾತಾಡಿಕೊಂಡು ಡಿಸೈಡ್ ಮಡ್ಕೊಂದ್ವಿ.....ಹಾಳಾದ್ದು ಶುಕ್ರವಾರನು ಫ್ರೀ ಇರಲಿಲ್ಲ... ಆಫೀಸ್ ಕೆಲಸ... ನೈಟ್ 10 :30 ಆಗಿತ್ತು ಮನೆ ಸೇರಿಕೊಂಡಾಗ..
ಶನಿವಾರ ಬೆಳಿಗ್ಗೆನೆ ಎದ್ದು ,..6 ಗೆ ಹೋಗ್ಬೇಕು ಅಂತ ಅನ್ಕೊಂಡು 6 :40 ಆಗಿತ್ತು ಮನೆ ಬಿಟ್ಟಾಗ.... ಮನೆ ಹತ್ರನೇ ಇರೋ.. ಜ್ಞಾನಭಾರತಿ(Bangalore university campus) ಒಳಗಡೆ ಇರೋ ಕಾಡಿಗೆ ಹೋಗೋಣ ಅಂತ ಮೊದಲೇ ಡಿಸೈಡ್ ಆಗಿತ್ತು.... ನಮ್ಮ ಬೆಂಗಳೂರಿನ ಮಧ್ಯ ಇಂಥ ಒಂದು ಜಾಗ ಇದೆ ಅಂತ ನನಗೆ ಇವೊತ್ತೇ ಗೊತ್ತಾಗಿದ್ದು.....ಒಳಗಡೆ ಇರುವ ಚಿಕ್ಕದಾದ ಅರಣ್ಯ ತುಂಬಾ ಚೆನ್ನಾಗಿ ಇದೆ.....
ಫೋಟೋಗ್ರಫಿ ಮಾಡೋಕೆ ಏನಾದರೂ ಒಂದು ಕಾನ್ಸೆಪ್ಟ್ ಬೇಕಲ್ವ... so ದಿಸ್ ಟೈಮ್,, ಚಿಟ್ಟೆ ಗಳ ಫೋಟೋ ತೆಗಿಯೋಣ ಅಂತ ಅನ್ಕೊಂದ್ವಿ... ನನ್ ಕಸಿನ್ ಆಗಲೇ ತುಂಬಾ ಸರಿ ಈ ಜಾಗಕ್ಕೆ ಬಂದಿದ್ದನಂತೆ....ಸರಿ ಚಿಟ್ಟೆಗಳು ಎಲ್ಲಿ ಸಿಗುತ್ತೆ ಅಂತ ಗೊತ್ತಿತು.... ತುಂಬಾ ಬಿಸಿಲು ಬರುವ ಮುಂಚೆ, ಅಲ್ಲಿ ಹೋಗಿ ಚಿಟ್ಟೆಗಳ ಫೋಟೋ ತೆಗಿಬೇಕಾಗಿತ್ತು... campus ನ ವಳಗಡೆ ನನ್ನ ಬೈಕ್ ಪಾರ್ಕ್ ಮಾಡಿ,,, ಚಿಕ್ಕದಾದ ಕಾಲು ದಾರಿನಲ್ಲಿ ನಡೆದುಕೊಂಡು ಹೋದ್ವಿ... ದಾರಿನಲ್ಲಿ ಹೋಗ್ತಾ ಹೂವ,, ಹುಲ್ಲಿನ ಮೇಲಿನ ಇಬ್ಬನಿ ಇವುಗಳ ಫೋಟೋ ಎಲ್ಲ ತಗೊಂಡ್ ಚಿಟ್ಟೆ ಹುಡುಕುತ್ತ ಹೊರಟ್ವಿ, ಎಷ್ಟು ಮುಂದೆ ಹೋದರು,, ಒಂದು ಚಿಟ್ಟೆ ನು ಸಿಗಲಿಲ್ಲ . ಮದ್ಯದಲ್ಲಿ ಎಲ್ಲೊ ಒಂದೆರಡು ಹಾರಿ ಬರ್ತಾ ಇತ್ತು,,, ಆದರೆ ಫೋಟೋ ತೆಗಿಯೋಣ ಅನ್ನೋಸ್ಟಕ್ಕೆ ಓದೋಕ್ತಾ ಇದ್ವು... ಇದರ ಫೋಟೋ ಇವೊತ್ತು ತೆಗೆದೇ ಹಾಗೆ ಅನ್ಕೊಂಡು,,ಸರ್ಕಸ್ ಮಾಡ್ಕೊಂಡ್ ಮುಂದೆ ಹೋಗ್ತಾ ಇದ್ವಿ... ಅವಾಗ ನನ್ ಕಸಿನ್ " ಇನ್ನು ಮುಂದೆ ಹೋಗೋಣ ಒಂದು ದೊಡ್ಡ ಹೊಂಡ ಇದೆ... ಅದರ ಹತ್ರ ಲಾಸ್ಟ್ ಟೈಮ್ ಸ್ವಲ್ಪ ಚಿಟ್ಟೆ ಗಳು ಇದ್ವು,, ಅಂತ... ಸರಿ ಬೇಗ ಬಾ ಟೈಮ್ ವೇಸ್ಟ್ ಮಾಡೋದು ಬೇಡ,,, ಅಂತ ಅಲ್ಲಿ ಗೆ ಓಡಿ ಹೋದ್ವಿ....ಇನ್ನು ಹತ್ರ ಹೋಗ್ತಾ ಇದ್ವಿ,,, ಅವಾಗ ಕಾಣಿಸ್ತು ನೋಡಿ,, ಚಿಟ್ಟೆ ಗಳ ಹಿಂಡು,,, ಸರಿ,,, ಸಿಕ್ಕಿದ್ದೇ ಚಾನ್ಸ್ ಅಂತ ನಿದಾನಕ್ಕೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟಕೊಂಡು ಸದ್ದು ಮಾಡದಿರ ಹತ್ರ ಹೋದ್ವಿ,,,, ಒಂದು ಸ್ವಲ್ಪ ಶಭ್ದ ಮಾಡಿ ಬಿಟ್ರು ಸಾಕು ಎಲ್ಲ ಎದ್ದು ಬೇರೆಕಡೆ ಹೋಗ್ತಾ ಇದ್ವು,,,, ೧೦ ಹೆಜ್ಜೆ ಇಡೋಕೆ ೫ ನಿಮಿಷ ತಗೊಂಡು,, ಅದರ ಹತ್ರ ಹೋದ್ವಿ.... ತುಂಬಾ ಚಿಟ್ಟೆಗಳ ಹಿಂಡು , ಒಂದೊಂದು ಒಂದೊಂದ್ ತರ ಡಿಸೈನ್ ,,ವೌ wah ಹಾಗೆ ಕೆಲವು ಫೋಟೋಗಳನ್ನು ತೆಗೆದ್ವಿ...ಆದರೆ ಸೂರ್ಯ ನಮಗೆ ಎದುರಾಗಿ ಇದ್ದಿದ್ದರಿಂದ lighting ಎಫೆಕ್ಟ್ ಜಾಸ್ತಿ ಇತ್ತು,, ಸರಿಯಾಗಿ ಬರ್ತಾ ಇರಲಿಲ್ಲ.... ಸರಿ ಹಾಗೆ ನಿದಾನಕ್ಕೆ ಹೊಂಡದ ಇನ್ನೊಂದು ಕಡೆ ಹೋಗೋಣ ಅಂತ,, ಸದ್ದು ಮಾಡದಿರ ಹೋದ್ವಿ.... ಮುಂದೆ ಹಸಿರು ಕೆಸರಿನ ಹೊಂಡ,,, ಆಳ ಎಷ್ಟು ಇದೆಯೋ ಗೊತ್ತಿಲ್ಲ... ಸರಿ ಆಗಿದ್ದು ಅಗಲಿ ಅಂತ,,, ಅ ಕಡೆ ಸರ್ಕಸ್ ಮಾಡಿಕೊಂಡು ಆ ಕಡೆ ಹೋದ್ವಿ...ಎಷ್ಟು ಬೇಕೋ ಅಸ್ತನ್ನು ಒಂದು ೨ ಹೌರ್ಸ್ ಕೂತ್ಕೊಂಡ್ ಫೋಟೋ ತೆಕ್ಕೊಂದ್ವಿ.... ನಿಜವಾಗಲು ಎಕ್ಷ್ಪೆಕ್ತ ಮಾಡಿರಲಿಲ್ಲ ಇಸ್ಟೊಂದು ಚಿಟ್ಟೆ ಸಿಗುತ್ತೆ ಅಂತ,,,, ನನಗಂತು ಫಸ್ಟ್ experience ...ಚಿಟ್ಟೆಗಳ ಫೋಟೋ ತೆಗಿಯೋದು... ಸಕತ್ ಮಜಾ ಇತ್ತು.... ಅಂತು ಕೆಲವು ಒಳ್ಳೆ ಫೋಟೋಗಳು ಸಿಕ್ಕವು,,,ಕೆಳಗೆ ಫೋಟೋ ಸಮೇತ ಹಾಕಿದ್ದೇನೆ ನೋಡಿ......
ಒಟ್ನಲ್ಲಿ ಶನಿವಾರದ ಬೆಳಿಗ್ಗೆ,,,, ಫುಲ್ ಜೋಷ್ ನಲ್ಲಿ... ಹ್ಯಾಪಿ ಆಗಿ ಕಳೆದು ಹೋಯ್ತು...... :-)
ಚಿಟ್ಟೆಗಳ ಬಗ್ಗೆ ಅಸ್ಟೊಂದು ಮಾಹಿತಿ ಗೊತ್ತಿಲ್ಲ.... ಆದರೆ ಫೋಟೋ ಚೆನ್ನಾಗಿ ಇತ್ತು,,, ನಿಮ್ಮಗಳ ಜೊತೆ ಶೇರ್ ಮಾಡ್ಕೋತಾ ಇದೇನೇ ಅಸ್ಟೇ....
ಚಿಟ್ಟೆಗಳ ಹಿಂಡು
ಚಿಟ್ಟೆಗಳ ಹಿಂಡು