ಈ ಮೇಲಿನ ಚಿತ್ರ ನೋಡಿದ್ರ... ಏನ್ ಸಕತ್ ಆಗಿ ಇದೆ ಅಲ್ವ ಆರ್ಟ್.?... ಹೌದು ಇದು ಎಲ್ಲಿ ಮಾಡಿರೋದು ಅಂತ ಗೊತ್ತ ...
ಇದನ್ನ ಎಲ್ಲಿ ಮಾಡಿದ್ದರೆ ಅನ್ನೋದನ್ನ ಹೀಗೆ ಮಾಡಿದ್ದರೆ ಅನ್ನೋದನ್ನ, ಕೇಳಿದ್ರೆ ನಿಮಗೆ ಆಶ್ಚರ್ಯ ಆಗುತ್ತೆ...
ಇಂಥ ಒಳ್ಳೆ ಯಾ ಆರ್ಟ್ ಅನ್ನು ಮಾಡಿರೋದು,, ಬತ್ತದ ಗದ್ದೆ ನಲ್ಲಿ...!!!! ಬತ್ತದ ಗದ್ದೆ ನಲ್ಲಿ ಹೀಗೆ ಮಾಡೋಕೆ ಆಗುತ್ತ ಅದು ಇಷ್ಟು ದೊಡ್ಡದಾಗಿ....?
ಹೌದು,, ಇದು ಯಾರೋ ಅನ್ಯ ಪ್ರಪಂಚದ alien ಮಾಡಿರೋದಲ್ಲ , ಇದನ್ನ ಮಾಡಿರುವುದು ಜಪಾನಿನ ರೈತರು...ಮಣ್ಣಿನ ಮಕ್ಕಳು....!!,,, ಆಶ್ಚರ್ಯ ಆಗ್ತಾ ಇರಬೇಕು ಅಲ್ವ... ಆದರೆ ನಂಬಲೇ ಬೇಕು...
ಹಾಂ ಇದನ್ನ ಸುಮ್ಮನೆ ಅವರ ಅಕ್ಕಿ ಬೆಳೆಯುವ ಹೊಲದಲ್ಲಿ ಪೇಯಿಂಟ್ ಅಥವಾ ಅನಿಮೇಷನ್ ಮಾಡಿರೋದಲ್ಲ... neet ಆಗಿ,, cleaver ಆಗಿ ಬತ್ತದ ತೆನೆಗಳನ್ನ ಬೆಳೆಸಿರೋದು...
ನಿದಾನಕ್ಕೆ ಬೇಸಿಗೆ ಮುಗಿಯುತ್ತ ಬಂದಂತೆ ಮುಂಗಾರಿನ ಸಮಯದಲ್ಲಿ ಈ ಬಿತ್ತನೆ ಕಾರ್ಯ ಶುರುವಾಗುತ್ತೆ.. ಬತ್ತದ ತೆನೆಗಳು ನಿದಾನಕ್ಕೆ ಬೆಳೆಯುತ್ತಾ ಬೆಳೆಯುತ್ತಾ...ಇಂಥ ಸುಂದರವಾದ ಕಲೆ ಬತ್ತದ ಗದ್ದೆ ಯಲ್ಲಿ ಬೆಳೆದು ನಿಲ್ಲುತ್ತೆ...
ಕುದುರೆ ಮೇಲೆ ಇರುವ ಸೈನಿಕನ ಚಿತ್ರ ಕಾಣುವ ಹಾಗೆ ಮಾಡಿರುವುದು ನೂರಾರು, ಸಾವಿರಾರು ಬತ್ತದ ತೆನೆ ಇಂದ ...ಇದರಲ್ಲಿ ಕಲರ್ ಹೇಗೆ ಬಂತಪ್ಪ ಅಂದರೆ,, ಅದೇ ಥರ ಕಲರ್ ಇರುವ ಬತ್ತದ ಸಸ್ಯಗಳಿಂದ....
ಹೌದು ಇರು ಶುರು ಆಗಿದ್ದು 1993 ರಿಂದ ಅಂತ ...ಒಂದು ಚಿಕ್ಕ ಹಳ್ಳಿ,, tokyo ನಗರದಿಂದ 600 mile ದೂರ ಇರುವ "Inakadate " ಎಂಬ ಹಳ್ಳಿ ಯಲ್ಲಿ ಇದು ಶುರು ಆಗಿದ್ದಂತೆ . ಇವಾಗ ಇದು ವರ್ಷ ವರ್ಷ 150 ,000 ಪ್ರವಾಸಿಗರನ್ನು ಆಕರ್ಸಿಸುತ್ತ ಇದೆ ಅಂತೆ...
ಪ್ರತಿ ವರ್ಷ, ಇಲ್ಲಿನ ಹಳ್ಳಿ ಜನರು ಹಾಗೆ ರೈತರು ಸೇರಿಕೊಂಡು 4 ತರದ ಅಕ್ಕಿ ಯನ್ನು ಬೆಳೆಯುತ್ತರಂತೆ . ಇದರಲ್ಲಿ ಒಂದು ದೊಡ್ಡ ಹೊಲದಲ್ಲಿ. ಹಳ್ಳಿಗರು ಮತ್ತೆ ರೈತರು ಕೂಡಿ ಯೋಚಿಸಿ..ಪ್ಲಾನ್ ಮಾಡಿ,, ಈ ತರಹ ಕಲೆ ಇರುವ ಹಾಗೆ ಬತ್ತದ ತೆನೆಗಳನ್ನು ಜೋಡಿಸುತ್ತರಂತೆ..ಅದು ಬೆಳೆದು ದೊಡ್ದದಾದಮೇಲೆ...ನೋಡೋಕೆ ಎರಡು ಕಣ್ಣು ಸಾಲದು.....
ಇಲ್ಲಿನ ರೈತರು ಬೆಳ್ಯುವ ೪ ಥರದ ಅಕ್ಕಿಯನ್ನು ,,ಇಂಥ ಆರ್ಟ್ ನ ಮಾಡುವುದಕ್ಕೆ ಕಂದು ಮತ್ತೆ ಹಳದಿ ಎಲೆಗಳಿರುವ "kodaimai ರೈಸ್" ಎಂಬ ಬತ್ತದ ತೆನೆಯನ್ನು ಮಾಮೂಲಿ ಹಸಿರು ಎಲೆಗಳ ತೆನೆಯ "tsugaru roman "
ಎಂಬ ವಿದದ ಬತ್ತದ ತೆನೆಯ ಮದ್ಯ ಬೆಳೆಸುತ್ತರಂತೆ.... ಇದನ್ನು ಉಪಯೋಗಿಸಿಯೇ ಒಪ್ಪವಾಗಿ ಒಂದರ ಮದ್ಯ ಒಂದು ತೆನೆಗಳನ್ನು ನೆಟ್ಟು,,, ಇಷ್ಟು ಸೊಗಸಾದ ಬತ್ತದ ಗದ್ದೆಯ ಚಿತ್ರಗಳನ್ನು ಮಾಡುತ್ತಾರೆ....
ಇವಾಗಂತೂ ಜಪಾನಿನ ಚಿಕ್ಕ ಚಿಕ್ಕ ಹಳ್ಳಿಗಳಲ್ಲೂ ಇದೆ ಥರ ಮಾಡ್ತಾ ಇದ್ದರಂತೆ... ಇದನನ್ನ ನೋಡಲೆಂದೇ ಜಪಾನಿಗೆ ಆಸಕ್ತಿ ಪ್ರಿಯರ ದಂಡು,,,ಪ್ರವಾಸಿಗರ ದಂಡು ಹೋಗ್ತಾ ಇರೋದಂತು ನಿಜ..... ಎಂಥ ಕಲೆ ಅಲ್ವ....
ಜಪಾನಿನ "Inakadate ಮತ್ತೆ Yonezawa " ಹಳ್ಳಿಯ ರೈತರಿಗೆ ಹಾಗೆ ಹಳ್ಳಿಗರಿಗೆ ನನ್ನ ಒಂದು ದೊಡ್ದು ನಮನ ಇಲ್ಲಿಂದಲೇ..... ಇಂತಹ ಒಳ್ಳೆಯ ಕಲೆಯನ್ನು ಪರಿಚಯ ಮಾಡಿಕೊಟ್ಟಿದಕ್ಕೆ
(ನನಗೆ ಇದರ ಬಗ್ಗೆ ಒಂದು ಮೇಲ್ ಬಂದಿತ್ತು ,, ಹಾಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಹುಡುಕಿದಾಗ ಸಿಕ್ಕ ಮಾಹಿತಿ ಇದು)