Thursday, October 8, 2009

ಬಿಲ್ಡಿಂಗ್ ಗೆ ಪೇಯಿಂಟ್ ಮಾಡೋದು ಅಂದ್ರೆ ಇದೇನಾ ?

ನೀವು ಗಮನಿಸಿರಬೇಕು, ಮೆಜೆಸ್ಟಿಕ್ ಸುತ್ತ ಮುತ್ತಲಿನ ಗೋಡೆಗಳ ಮೇಲೆ ಇತ್ತೀಚಿಗೆ ಸೆನೆಮಾ ವಾಲ್ ಪೋಸ್ಟ್ ಬದಲಾಗಿ, ನಮ್ಮ ಕರ್ನಾಟಕದ ಸಂಸ್ಕೃತಿ ಬಿಂಬಿಸುವ ಸುಂದರವಾದ ಪೇಂಟಿಂಗ್ ಚಿತ್ರಗಳನ್ನು ಬಿಡಿಸ್ತಾ ಇದ್ದಾರೆ ...ಹೀಗೆ ಬಿಡಿಸುವುದಕ್ಕೆ BBMP ನವರು ಎಸ್ಟೋ ಜನ ಕಲಾವಿದರಿಗೆ ಅನುಕೂಲ ಮಾಡಿ ಕೊಟ್ಟಿದ್ದರಂತೆ.. ಖಂಡಿತ ಇದೊಂದು ಒಳ್ಳೆಯ ಬೆಳವಣಿಗೆ..

ನಿಜಕ್ಕೂ BBMP ಗೆ ಧನ್ಯವಾದ ಹೇಳಬೇಕು .ಬರಿ ಕೊಳಕು ಸೆನಿಮಾ posters ನಿಂದ ನಗರದ ಸೌಂದರ್ಯ ಹಾಳಾಗಿ ಹೋಗ್ತಾ ಇತ್ತು . ಮೆಜೆಸ್ಟಿಕ್ ಹಾಗು ಸುತ್ತಮುತ್ತಲಿನ ಗೋಡೆಗಳ ಮೇಲೆ, ನಮ್ಮ ಸಂಸ್ಕೃತಿ , ಕರ್ನಾಟಕದ ಪ್ರಸಿದ್ದ ಪ್ರವಾಸ ತಾಣಗಳ ಪರಿಚಯ ಮಾಡಿಕೊಟ್ಟಿರುವುದು ಸ್ವಾಗತಾರ್ಹ,,
ಬಹುಷಃ ನಮ್ಮ ಇಂಡಿಯಾ ದಲ್ಲಿ ಮೊದಲ ಸಿಟಿ ಅಂತ ಕಾಣುತ್ತೆ ನಮ್ಮ ಬೆಂಗಳೂರು ಈ ರೀತಿ ಪೇಂಟಿಂಗ್ ಗಳನ್ನು ಮಾಡಲು ಹೊರಟಿರುವುದು, ಏನೇ ಇರಲಿ ಇದಂತು ಒಂದು ಒಳ್ಳೆಯ ಹೆಜ್ಜೆ, ಇದನ್ನು ಹಾಗೆ ಕಾಪಾಡಿ ಕೊಂಡು ಬರುವ ಜವಾಬ್ದಾರಿ ನಮ್ಮ ಬೆಂಗಳೂರಿನ ಜನೆತೆಯ ಮೇಲು ಇದೆ . ಬರಿ ಸ್ವಲ್ಪ ದಿನಕ್ಕೋಸ್ಕರ ಉಪಯೋಗಿಸಿ ಹಾಳು ಮಾಡದೇ. ಚೆನ್ನಾಗಿ ಕಾಪಾಡಿಕೊಂಡು ಬರುವ ಜವಾಬ್ದಾರಿ ನಮ್ಮ ಬೆಂಗಳೂರಿಗರ ಮೇಲೆ ಇದೆ....
ಇದೆ ವಿಷಯವಾಗಿ ಏನನ್ನೋ ಹುಡುಕ್ತಾ ಇರಬೇಕಾದ್ರೆ ಬೇರೆ ದೇಶದಲ್ಲಿ ದೊಡ್ಡ ದೊಡ್ಡ ಬಿಲ್ಡಿಂಗ್, ಕಟ್ಟಡಗಳಿಗೆ ಪೇಯಿಂಟ್ ಮಾಡಿರುವ ಕೆಲವು ಅಪರೂಪದ ಚಿತ್ರ ಗಳು ಸಿಕ್ತು,, . ಒಂದೊಂದು ಕಟ್ಟಡದಲ್ಲಿನ ಪೇಂಟಿಂಗ್ ಗಳನ್ನೂ ನೋಡ್ತಾ ಇರಬೇಕಾದ್ರೆ. ಅಚ್ಚರಿ ಎನಿಸುತ್ತದೆ , " ಒಂದು ಬಿಲ್ಡಿಂಗ್ ಗೆ ಈ ರೀತಿನು ಪೇಯಿಂಟ್ ಮಾಡ್ತಾರೆ ಅಂತ ಗೊತ್ತಿರಲಿಲ್ಲ... "ಕೆಳಗಿರುವ ಕೆಲವು ಚಿತ್ರಗಳನ್ನು ನೋಡಿ, ಎಲ್ಲೊ ಒಂದೇ ಒಂದು ಕಡೆ ಮಾಡಿದ್ದಲ್ಲ.. ಜರ್ಮನಿ, ಚೀನಾ, ಅಮೆರಿಕ, ಹೀಗೆ ಕೆಲವು ದೇಶದ ಆಯ್ದ ಸುಂದರ ಬಿಲ್ಡಿಂಗ್ ಪೇಂಟಿಂಗ್ ಇದು... ಯಾವ ಕಲೆಗಾರ ಅಥವಾ ಪುಣ್ಯಾತ್ಮ ಮಾಡಿ maintain ಮಾಡ್ತಾ ಇದ್ದರೋ ಗೊತ್ತಿಲ್ಲ . ಆದರೆ ಒಂದು ಒಳ್ಳೆಯ ಕಲಾ ಸೌಂದರ್ಯದ ಕಟ್ಟಡ ವಾಗಿ ಜನ ಮನಸೂರೆ ಗೊಳ್ಳುತ್ತಾ ಇದೆ . ಹಾಗು ಇಂಥ ಕಟ್ಟಡಗಳು ಅಲ್ಲಿನ ಸೌಂದರ್ಯವನ್ನು ಹೆಚ್ಚಿಸುತ್ತಾ ಇದೆಯಂತೆ...

ಇದೆ ರೀತಿ ನಮ್ಮ ಬೆಂಗಳೂರಿನಲ್ಲೂ ಬಿಡಿಸುತ್ತಿರುವ ಗೋಡೆ ಪೇಂಟಿಂಗ್ ಗಳು ನಮ್ಮ ನಗರದ ಸೌಂದರ್ಯವನ್ನು ಹೆಚ್ಚಿಸುತ್ತದೆ ಅನ್ನುವುದು ನನ್ನ ನಂಬಿಕೆ...

ಇನ್ನು ಹೆಚ್ಚಿಗೆ ಇದೆ ರೀತಿ ಕಲೆಗೆ ಪ್ರೋಸ್ಥಾಹ  ಸಿಕ್ಕು, ನಮ್ಮ ಬೆಂಗಳೂರಿನ ಎಲ್ಲ  ಖಾಲಿ ಗೋಡೆಗಳ ಮೇಲೂ ನಮ್ಮ ಸಂಸ್ಕೃತಿ ಯನ್ನು ಬಿಂಬಿಸುವ ಥರ ಒಳ್ಳೆಯ ಪೇಂಟಿಂಗ್ ಗಳನ್ನೂ ಮಾಡಿದರೆ ಎಷ್ಟು  ಚೆನ್ನಾಗಿ ಇರುತ್ತೆ ..ಅಲ್ವ ..