Friday, October 2, 2009

ಬ್ರೆಡ್ ಆರ್ಟ್ .......ನೋಡಿದಿರಾ?

ಅಲ್ಲ ಕಣ್ರೀ ... ಇವರು ತಿನ್ನೋ ವಸ್ತುನು ಬಿಡೋಲ್ಲ ನೋಡ್ರಿ,,,ಒಟ್ಟಿನಲ್ಲಿ ತಮ್ಮಲ್ಲಿರೋ ಕಲೆ ತೋರಿಸಬೇಕು ಅಂದ್ರೆ ಏನ್ ಸಿಕ್ರು ಬಿಡೋದಿಲ್ಲ ಅಂತಾರಲ್ಲ ಈ ಜನ..... :-)
ನಾವು ಬ್ರೆಡ್ ನ ತಿನ್ನೋಕೆ ಮಾತ್ರ ಉಪಯೋಗಿಸುತ್ತೇವೆ ಅಲ್ವ... (ಹೌದು ಅದು ಇರೋದೇ ತಿನ್ನೋಕೆ ಅಂಥ,!! ) ಆದರೆ ಇಲ್ಲಿ ನೋಡಿ ಕೆಲವು ಮಹಾನುಭಾವರು,, ಬ್ರೆಡ್ ಬರಿ ತಿನ್ನೋದಕ್ಕೆ ಮಾತ್ರ ಅಲ್ಲ , ಟೈಮ್ ಸಿಕ್ರೆ ಈ ತರ ಚಿತ್ರ ಗಳನ್ನು ಮಾಡ್ತೇವೆ ಅಂಥ ತೋರಿಸಿದ್ದರೆ... ಏನ್ ವಿಚಿತ್ರ ಅಲ್ವ....!!!
ಹೌದು ನಾನು ಯೋಚಿಸ್ತಾ ಇದ್ದೆ.. ಚಿಕ್ಕವನಗಿರಬೇಕಾದರೆ..ಬ್ರೆಡ್ ಪೀಸ್ ನ ಚಿಕ್ಕ ಲೋಟದಲ್ಲಿ ಇರೋ ಕಾಫೀ ನಲ್ಲೋ ಅಥವ ಹಾಲ್ ನಲ್ಲೋ ಅಡ್ಡಿ ಕೊಂಡ ತಿನ್ನಬೇಕಾದರೆ ಬರಿ ಬ್ರೆಡ್ ನಲ್ಲೆ ಏನೇನೊ ತರ ಡಿಸೈನ್ ಮಾಡ್ತಾ ಇದ್ದದ್ದು ನೆನಪಿಗೆ ಬಂತು...
ಹಾಗೆ,, ಕೆಲವರು ಚಿಕ್ಕ ಅಕ್ಕಿ ಕಾಳಿನಲ್ಲಿ ಹೆಸರು ಬರೆಯುವುದು , ಡಿಸೈನ್ ಮಾಡುವುದು , ಮತ್ತೆ ದೊಡ್ಡ ದೊಡ್ಡ ಹೋಟೆಲ್ ನಲ್ಲಿ ಸಲಾಡ್ಸ್, ತರಕಾರಿನಲ್ಲಿ different ಆಗಿ ಜೋಡಿಸಿ ಕೊಡುವುದು, ಹಾಗೇನೇ ಮದುವೆ ಮನೆಗಳಲ್ಲಿ ದೊಡ್ಡ ದೊಡ್ಡ ಕುಂಬಳ ಕಾಯಿ ನಲ್ಲೋ ಅಥವ ಬೇರೆ ತರಕಾರಿನಲ್ಲೋ ಚೆಂದದ ಕಲಾಕೃತಿ ಗಳನ್ನ ಮಾಡಿರುತ್ತಾರೆ ಅಲ್ವ...

ಆದರೆ ಹೀಗೆ ಬ್ರೆಡ್ ನಲ್ಲಿ ಮಾಡಿರುವುದನ್ನ ಇದೆ ಮೊದಲ ಸಲ ನೋಡ್ತಾ ಇರೋದು.....



ಬ್ರೆಡ್ ಪೌಂಡ್ ನಲ್ಲಿ ಮಾಡಿರೋದು, ಆದರೆ ಈ ತರ ಚಿತ್ರ ಕಾಣುವ ಹಾಗೆ ಹೇಗೆ ಬೀಯಿಸಿದ್ದರೋ ಗೊತ್ತಿಲ್ಲ..!!!




ಬ್ರೆಡ್ ಒಳಗಡೆ ಚಿತ್ರ ಬಿಡಿಸಿರೋದಲ್ಲ ,, ಇದೆ ರೀತಿ ಬೈಸಿರೊದಂತೆ



(ಮದುವೆ ಮನೆಗಳಲ್ಲಿ ಮಾಡಿರುವ ತರಕಾರಿಯ ಕೆಲವು ವಿಚಿತ್ರ ಚಿತ್ರಗಳು ಇದೆ,, ಇನ್ನಸ್ಟು ಸಿಕ್ಕರೆ ಅದನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ)