ಆಂಗ್ಲ ಹೆಸರು: Painted Stork (ಪೇಂಟೆಡ್ ಸ್ಟಾರ್ಕ್)
ವೈಜ್ಞಾನಿಕ ಹೆಸರು: Mycteria Leucocephala (ಮೈಕ್ಟೀರಿಯಾ ಲ್ಯೂಕೊಕೆಫಾಲ)
ಸಾಮಾನ್ಯವಾಗಿ ವಲಸೆ ಹಕ್ಕಿಗಳು ಇವು.. ಆದರೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಬೆಂಗಳೂರು, ಕೊಕ್ಕರೆ ಬೆಳ್ಳೂರು, ಹಾಗು ಕಾವೇರಿ ನದಿ ತೀರದ ಹತ್ತಿರ ತಮ್ಮ ವಾಸಸ್ಥಾನ ವನ್ನು ಮಾಡಿ ಕೊಂಡು ಇಲ್ಲೇ ರೆಸಿಡೆನ್ಸ್ ಹಕ್ಕಿಗಳಾಗಿ ಬದುಕಿವೆ....
ನಮ್ಮ ಬೆಂಗಳೂರಿನಲ್ಲಿ , ಮಡಿವಾಳ ಕೆರೆ, ಹೊಸಕೋಟೆ ಕೆರೆ ಹಾಗೆ ಸೂಲಿ ಕೆರೆ, ಕೊಮ್ಮಘಟ್ಟ ಕೆರೆ.ಹೀಗೆ ಹಲವು ಕೆರೆಗಳ ಹತ್ತಿರ ಇರುತ್ತವೆ....
ಕೊಕ್ಕು ಹಳದಿ ಬಣ್ಣದಾಗಿದ್ದರೆ ತಲೆಯ ಭಾಗ ಕಿತ್ತಳೆಯ ಬಣ್ಣದ್ದಾಗಿದೆ. ಕತ್ತಿನ ಭಾಗ ಬಿಳಿಯಿಂದ ಕೆಂಚು. ರೆಕ್ಕೆಯ ಮೇಲ್ಬಾಗದಲ್ಲಿ ಕಪ್ಪು ಬಿಳುಪಿನ ಪಟ್ಟಿಗಳನ್ನು ಕಾಣಬಹುದು. ರೆಕ್ಕೆಯ ಕೆಳಭಾಗದಲ್ಲಿ 'ಬಣ್ಣದ' ಕೊಕ್ಕರೆ ಎಂಬ ಹೆಸರಿಗೆ ಕಾರಣವಾದ ಗುಲಾಬಿ ವರ್ಣವಿದೆ. ಎದೆಯ ಭಾಗದಲ್ಲಿ ಬಿಳಿಯ ಮಧ್ಯೆ ಕೊಂಚ ಕಪ್ಪು ಪಟ್ಟಿಯಿದೆ. ಇದಕ್ಕಾಗಿ ಬಣ್ಣದ ಕೊಕ್ಕರೆ ಅಂತ ಹೆಸರು ಇದೆ..
ಸಾಮಾನ್ಯವಾಗಿ ಮೀನು, ಏಡಿ, ಕಪ್ಪೆ ಗಳನ್ನೂ ಸಣ್ಣ ಸಣ್ಣ ಜಲಚರ ಜೀವಿಗಳನ್ನು ತಿಂದು ಜೀವಿಸುತ್ತವೆ...
ಕೆಳಗಿರುವ ಚಿತ್ರಗಳು ಮೊನ್ನೆ ಭಾನುವಾರ ೦೮೦೩೨೦೨೦ ರಾಜರಾಜೇಶ್ವರಿ ನಗರದ ಹತ್ತಿರ ಒಂದು ಸಣ್ಣ ಕೆರೆ ಯಲ್ಲಿ ಸಿಕ್ಕಿದ್ದು.