ಬೊಂಬಾಯಿ ಮಿಠಾಯಿ
ಬೊಂಬಾಯಿ ಮಿಠಾಯಿ.... ಎಷ್ಟು ಜನಕ್ಕೆ ಗೊತ್ತಿದೆ...? ನಾವಂತೂ ಚಿಕ್ಕ ಮಕ್ಕಳಿದ್ದಾಗ ಸ್ಕೂಲಿನ ಹತ್ತಿರ, ಸಂತೆಯಲ್ಲಿ ಅಥವಾ ಜಾತ್ರೆ ಗಳ ಹತ್ತಿರ ಬೊಂಬಾಯಿ ಮಿಠಾಯಿಯಾ ತರ ತರ ಆಕೃತಿಗಳನ್ನು ಮಾಡಿಸಿಕೊಂಡು ತಿಂದು ಚಪ್ಪರಿಸುತ್ತಿದ್ದರೆ... ಆಹಾ ಎಷ್ಟು ಚೆನ್ನಾಗಿತ್ತು... ಬಾಯಿಯಲ್ಲಿ ಇಟ್ಟರೆ ಹಾಗೆ ಕರಗಿ ಹೋಗುತ್ತಿತ್ತು....
ನನಗೆ ಜ್ಞಾಪಕ ಇರುವ ಹಾಗೆ 10 ಪೈಸಾ, 20 ಪೈಸಾ ಹಾಗೂ 50 ಪೈಸೆಗೆ , ಈ ಬೊಂಬಾಯಿ ಮಿಠಾಯಿ ಸಿಕ್ಕುತ್ತಿತ್ತು... ಕೈ ಬೆರಳಿಗೆ ಉಂಗುರ... ಕೈಗೆ ವಾಚು, ಚಿಕ್ಕ ಚಿಕ್ಕ ಗೊಂಬೆಗಳು, ಕಿವಿಯೋಲೆ ಹೀಗೆ ಅನೇಕ ರೀತಿಯಲ್ಲಿ ಈ ಬೊಂಬಾಯಿ ಮಿಠಾಯಿ ಮಾಡುವ ಮಿಟಾಯಿ ಮಾಮ... ಮಾಡಿಕೊಡುತ್ತಿದ್ದ.... ಸೈಕಲ್ಲು ಅಥವಾ ಮೋಟರ್ ಬೈಕಿನ ಹಿಂದೆ ಒಂದು ಚಿಕ್ಕ ಕೋಲು ಅದರಲ್ಲಿ ತರ ತರ ಲಂಗಾ ಹಾಕಿಕೊಂಡು ಕಿವಿಗೆ ಓಲೆ ಇಟ್ಟುಕೊಂಡ ಪುಟ್ಟದಾದ ಒಂದು ಗೊಂಬೆ...ತನ್ನ ಎರಡು ಕೈಗಳನ್ನು ಚಪ್ಪಾಳೆ ರೀತಿಯಲ್ಲಿ ಬಡಿಯುತ್ತಾ ದಾರಿಯಲ್ಲಿ ಸಾಗುತ್ತಾ ಬರುತ್ತಿದ್ದರೆ ಅದರ ಹಿಂದೆ ಮಕ್ಕಳ ಹಿಂಡು ಕೆ ಕೆ ಹಾಕಿಕೊಂಡು... ನಾ ಮುಂದು ತಾಮುಂದು ಎಂದು.. ಅಪ್ಪ ಅಮ್ಮನ ಹತ್ತಿರ ಗೋಗರೆದು ಒಂದು ಹತ್ತು ಪೈಸಾ.. ಅಥವಾ 20 ಪೈಸಾ ಇಸ್ಕೊಂಡು ಇದರ ಹಿಂದಗಡೆ ಓಡಿ ಹೋಗುತ್ತಿದ್ದರು...... ಇದೆಲ್ಲಾ ಎಲ್ಲಿ ಕಳೆದು ಹೋಗಿದೆ ಈಗಲೂ ಕೆಲವೊಮ್ಮೆ ಹಳ್ಳಿಗಳ ಕಡೆ ಈ ಬೊಂಬಾಯಿ ಮಿಠಾಯಿ ಮಾಡುವವರು ಸಿಗುತ್ತಾರೆ... ಮೊನ್ನೆ ನಮ್ಮ ಬೆಂಗಳೂರು ಯುನಿವರ್ಸಿಟಿ ಹತ್ತಿರ ಬಂದಿದ್ದ ಒಬ್ಬ ಮಿಟಾಯಿ ಮಾಡುವ... ಕಾಲೇಜು ಹುಡುಗ-ಹುಡುಗಿಯರು ... ದೊಡ್ಡವರು ಕೂಡ ಮುಗಿಬಿದ್ದು ತಮ್ಮ ಹಳೆ ಕಾಲದ ನೆನಪುಗಳನ್ನು ನೆನೆದು ಬಗೆಬಗೆಯ ಮಿಠಾಯಿಗಳನ್ನು ಮಾಡಿಸಿಕೊಂಡು ತಿನ್ನು ಚಪ್ಪರಿಸಿ ಫೋಟೋ ತೆಗೆಸಿಕೊಂಡು ಹೋಗುತ್ತಿದ್ದರು... ನಾನು ನನ್ನ ಮಗನಿಗೆ ನಾನು ಚಿಕ್ಕವನಿದ್ದಾಗ ಇದನ್ನು ತಿನ್ನುತ್ತಿದ್ದ ಕಥೆಯನ್ನು ಹೇಳಿ ಅವನಿಗೂ ಕೊಡಿಸಿದೆ ಮೊದಲೇ ಸಿಹಿ ಬಾಯಿ ಚಪ್ಪರಿಸಿಕೊಂಡು ಕೈಯಲ್ಲಿ ಅಂಟಂಟು ಮಾಡಿಕೊಂಡು ತಿನ್ನುತ್ತಿದ್ದ...
ಈ ತರಹದ ಎಲ್ಲೋ ಕಳೆದು ಹೋದ ಹಳೆ ನೆನಪುಗಳು ಮತ್ತೆ ಕಣ್ಮುಂದೆ ಬಂದಾಗ ಸಿಗುವ ಮಜಾನೇ ಬೇರೆ.... ಎಷ್ಟು ಜನಕ್ಕೆ ಇದರ ಅನುಭವ ಇದೆ ? ತಿಳಿಸಿ ಹೇಳಿ