Monday, November 6, 2017

ಜಯಮಂಗಲಿ ಕೃಷ್ಣಮೃಗ ವನ್ಯದಾಮ


ಜಯಮಂಗಲಿ ಕೃಷ್ಣಮೃಗ ವನ್ಯದಾಮ 




    ಭಾರತದ ಹುಲ್ಲುಗಾವಲು ಗಳಲ್ಲಿ ತುಂಬಾ ಕಂಡು ಬರುವ ಕೃಷ್ಣಮೃಗಗಳ ಸಂತತಿ ಇಂದು ನಶಿಸಿ ಹೋಗುತ್ತಿದೆ..  ಇದರ ಆವಾಸ ಕೆಲವೇ ಕೆಲವು ಸೇಮಿತ ಹುಲ್ಲುಗಾವಲು ಗಳಿಗೆ ಮಾತ್ರ ಸೀಮಿತ ವಾಗಿದೆ.    ಅದರಲ್ಲಿ ಒಂದು ನಮ್ಮ ಮಧುಗಿರಿ ಹತ್ತಿರ ಇರುವ ಮೈದನಹಳ್ಳಿ ಕೃಷ್ಣಮೃಗ ವನ್ಯದಾಮ..  
ಈ ಪ್ರದೇಶದಲ್ಲಿ ಮಳೆ ಕಡಿಮೆ..  ಕೊಡಿಗೇನಹಳ್ಳಿ ಇಂದ ಸ್ವಲ್ಪ ಮುಂದೆ ಹೋದರೆ ವಿಶಾಲವಾದ ಹುಲ್ಲುಗಾವಲಿನ ಬಯಲು ಪ್ರದೇಶ ಸಿಗುತ್ತದೆ ...   1997 ರ ವರೆಗೂ ಇಲ್ಲಿ ಕೃಷ್ಣಮೃಗಗಳ ಸಂತತಿ ಇದೆ ಎಂದು ಹೊರಜಗತ್ತಿಗೆ ಗೊತ್ತೇ ಆಗಿರಲಿಲ್ಲ ...    
ಕ್ರಮೇಣ ಅರಣ್ಯ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಂಡು  ಸುತ್ತಲಿನ ಕೆಲವು ಗೋಮಾಳ ಪ್ರದೇಶವನ್ನು ಕೂಡಿಸಿ "ಜಯಮಂಗಲಿ ಕೃಷ್ಣಮೃಗ ರಕ್ಷಿತಾ ಅರಣ್ಯ" ವಾಗಿ ರೂಪಿಸಿದ್ದಾರೆ ..    ಇದು ಸುಮಾರು 850 ಎಕರೆ ಪ್ರದೇಶ ಹೊಂದಿದೆ  ಇದಕ್ಕೆ ಹೊಂದಿಕೊಂಡಂತೆ ಕೆಲವು ಹಳ್ಳಿಗಳು ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ . 
ಜಯಮಂಗಲಿ ಎಂದು ಹೆಸರು ಬರಲು ಪಕ್ಕದಲ್ಲೇ ಮಳೆಗಾಲದಲ್ಲಿ ಹರಿಯುವ ಜಯಮಂಗಲಿ ನದಿ ಕಾರಣ.    ಇವಾಗ ಇಲ್ಲ ಬಿಡಿ ಪೂರ್ತ ಬತ್ತಿ ಹೋಗಿದೆ...

ಈ ಪ್ರದೇಶ ಕೃಷ್ಣಮೃಗ ಗಳಿಗೆ ಮಾತ್ರ ವಲ್ಲದೆ ಇನ್ನು ಹಲವು ಜೀವ ಪ್ರದೆಭ ಗಳಿಗೆ ಆಶ್ರಯ ನೀಡುತ್ತಿದೆ .   ಇಲ್ಲಿ 
19 ಹೆಚ್ಚು ಪ್ರಬೇದದ ಸಸ್ತನಿಗಳು ಇದೆ. ನರಿ , ಕಾಡು ಬೆಕ್ಕು, ಕಾಡು ಮೊಲ  ದೊಡ್ಡ ಮುಂಗುಸಿ , 
125 ಹೆಚ್ಚು ಪ್ರಬೇದದ ಪಕ್ಷಿಗಳು ಇಲ್ಲಿ ಇದೆ 
67 ಹೆಚ್ಚು ಪ್ರಬೇದದ ಚಿಟ್ಟೆಗಳು,  ವಿವಿದ ಭಗೆಯ ಹಾವುಗಳು.  ಹಲ್ಲಿಗಳು  ಹಾಗು ಅಪರೂಪದ ಕಪ್ಪೆ ಗಳು ಇದೆ .

ಇಲ್ಲಿಗೆ ಹೋಗಲು 
1 ಬೆಂಗಳೂರು - ಕೊರಟಗೆರೆ - ಮಧುಗಿರಿ - ಪುರವರ - ಜಯಮಂಗಲಿ ಅರಣ್ಯ ಧಾಮ
2 ಬೆಂಗಳೂರು - ಕೊರಟಗೆರೆ - ಮಧುಗಿರಿ - ಕೊಡಿಗೆನಹಳ್ಳಿ- ರೆಡ್ಡಿಹಳ್ಳಿ  - ಜಯಮಂಗಲಿ ಅರಣ್ಯ ಧಾಮ

" ಆಸಕ್ತಿ ಇರುವವರು ಹೋಗಿ ನೋಡಿ ಕೊಂಡು ಬನ್ನಿ,  ಆದರೆ ದಯವಿಟ್ಟು ತಾವು ತಂದ ತಿಂಡಿಗಳನ್ನು ನೀರಿನ ಬಾಟಲಿ , ಪ್ಲಾಸ್ಟಿಕ್ ಗಳನ್ನೂ ಎಲ್ಲೆಂದರಲ್ಲಿ ಬಿಸಾಡಬೇಡಿ "   ಇವುಗಳ ಸಂರಕ್ಷಣೆ ನಮ್ಮ ಕರ್ತ್ಯವ ಕೂಡ ಹೌದು.     

 ಯಾರು ನೋಡ್ತಾ ಇದ್ದಾರೆ ನಮ್ಮನ್ನು
 ಪ್ರೌಡ ಹೆಣ್ಣು ಕೃಷ್ಣಮೃಗ
 ಹೆಣ್ಣು ಕೃಷ್ಣಮೃಗಗಳ ಗುಂಪು 


 ಪ್ರೌಡ ಗಂಡು  ಕೃಷ್ಣಮೃಗ




 ನೆಗೆದು ಓಡುತಿರುವ ಹೆಣ್ಣು ಕೃಷ್ಣಮೃಗ



 ಅಮ್ಮ ಮತ್ತೆ ಮರಿ 





 ಯಾರದು ಯಾರೋ ಏನೋ ಮಾಡ್ತಾ ಇದ್ದಾರೆ..


                        ನನ್ನ ಲೋಕ ನಾನೇ ರಾಜ .....