Tuesday, November 29, 2016

TR ಕನ್ನಡ ಹಬ್ಬ ೨೦೧೬ ..kannada habba 2016


ಕನ್ನಡ ಹಬ್ಬ ೨೦೧೬ ..kannada habba 2016



ನವೆಂಬೆರ್ ತಿಂಗಳು ಬಂತೆಂದರೆ ನಮಗೆ ಸ್ವಲ್ಪ ಜಾಸ್ತಿ ಕೆಲಸ....   ರಜ್ಯೋತ್ಸವದಗಡಿ ಬಿಡಿ , ಕಾರ್ಯಕ್ರಮಗಳ ತಯಾರಿ. ಎಲ್ಲ.    ಪ್ರತಿ ವರುಷದದಂತೆ ಈ ವರುಷವು ಕೂಡ ನಮ್ಮ IT ಕಂಪನಿ ನಲ್ಲಿ  ಕನ್ನಡದ ಕಂಪು ಬಹಳ ಜೋರಾಗಿ ಪಸರಿಸಿತು ....    ಈ ವರುಷ ನಮ್ಮ ಕಂಪನಿ ನಲ್ಲಿ ಆಚರಿಸುತ್ತಿರುವ ೧೦ನೆಯ ವರುಷದ ಕನ್ನಡ ಹಬ್ಬ.    ವರ್ಷದಿಂದ ವರ್ಷಕ್ಕೆ ನಮ್ಮ ಕನ್ನಡಾಭಿಮಾನಿಗಳ ಉತ್ಸಾಹ ಜೋರಾಗುತ್ತಿದೆ ಹೊರತು ಕಮ್ಮಿ ಆಗಲಿಲ್ಲ.    ಪ್ರತಿವರುಷವೂ   ನಮ್ಮ ಕನ್ನಡಮ್ಮನ ಹಬ್ಬದಲ್ಲಿ ಮಿಂದು ಖುಷಿ ಇಂದ ಸಂಬ್ರಮಿಸುತ್ತಾ ಇದ್ದೇವೆ.
ಈ ಸರಿ ಏನು ಹೊಸದು ಅಂತೀರಾ ....    ಈ ವರುಷ ನಾವುಗಳು ಪರಿಸರ ಸ್ನೇಹಿ ಕನ್ನಡ ರಾಜ್ಯೋತ್ಸವ ವನ್ನು ಆಚರಿಸ ಬೇಕು ಅಂತ ತೀರ್ಮಾನಿಸಿ.... ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡಿ, ಹಲಾವಾರು ಅತ್ತ್ಯುನ್ನತ ಪ್ರಶಸ್ತಿ ಪಡೆದುಕೊಂಡಿರುವ ನಮ್ಮ ಶಾತಯುಷಿ ಅಜ್ಜಿ, “ಸಾಲು ಮರದ ತಿಮ್ಮಕ್ಕ” ಅವರನ್ನು ಕರೆಸಿ ಸನ್ಮಾನ ಮಾಡಿದ್ದೂ ನಿಜಕ್ಕೂ ೧೦ನೆ ವರುಷದ ಕನ್ನಡ ಹಬ್ಬಕ್ಕೆ ಒಂದು ಶೋಭೆ ತಂದಿತ್ತು....    ಇವರ ಜೊತೆ ನಮ್ಮ ಕರುನಾಡಿನ ಹೆಮ್ಮೆಯ ಮಗಳು “ಸುದಾ ಬರಗೂರು” ಅವರ ಹಾಸ್ಯ ನೆರೆದಿದ್ದ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿ ಮುಳುಗಿಸಿ  ಸಂಬ್ರಮಿಸುವಂತೆ ಮಾಡಿತ್ತು.
ಇದೆಲ್ಲದರ ಜೊತೆಗೆ ಮತ್ತೊಂದು ವಿಶೇಷ ಎಂದರೆ ಕನ್ನಡ ಸಂಸ್ಕೃತಿಯನ್ನು ಗೊಂಬೆಗಳ ಮೂಲಕ ಪರಿಚಯಿಸುವ ಒಂದು ಪುಟ್ಟ ಪ್ರಯತ್ನ ಕ್ಕೆ ಸಿಕ್ಕ ಅದ್ಬುತ ಪ್ರತಿಕ್ರಿಯೆ.    “ಪ್ರಮಿಳ ರಾವ್  ಅವರು ತಮ್ಮ ಹವ್ಯಾಸಕ್ಕಾಗಿ ಸಂಗ್ರಹಿಸಿದ್ದ ಮೈಸೂರು ದಸರಾ ಮತ್ತು ಕರ್ನಾಟಕದ ಮದುವೆಯ ಸಂಪೂರ್ಣ ಪರಿಚಯ ಹೇಳುವ ಚಿಕ್ಕ ಬೊಂಬೆಗಳ ಪ್ರದರ್ಶನ ಅತ್ಯದ್ಬುತ ವಾಗಿತ್ತು.    (ವಿಶೇಷ ಕಾಳಜಿ ವಹಿಸಿ ಅವರ ಹತ್ತಿರ ನಾನೇ ಖುದ್ದಾಗಿ ತೆಗೆದು ಕೊಂಡು ಬಂದಿದ್ದೆ.)   
ಪ್ರತಿವರುಷದಂತೆ ನಮ್ಮ ಕಲೆ ಬಿಂಬಿಸುವ ಪ್ರಯತ್ನದ ಸಲುವಾಗಿ  ಈ ಸರಿ ಪಟದ ಕುಣಿತ ಹಾಗು ಹುಲಿವೇಷ ದವರನ್ನು ಕರೆಸಿದ್ದೆವು  ಅವರ ಪ್ರದರ್ಶನ ಅದ್ಬುತವಾಗಿತ್ತು.    ತಮಟೆಯ ನಾದಕ್ಕೆ ಆಫೀಸ್ ನಲ್ಲಿ ಒಳಗೆ ಕುಳಿತಿರುವ ಸಹದ್ಯೋಗಿ ಮಿತ್ರ ರೆಲ್ಲರೂ ಹೊರಗಡೆ ಬಂದು ತಲೆ ಆಡಿಸುತ್ತಾ ಇದ್ದರು ....
ಸೂರಜ್ ಮತ್ತೆ ಶೀಲ ಅವರಿಂದ ಉತ್ತಮ ಕಾರ್ಯಕ್ರಮ  ನಿರೂಪಣೆ,   ಇದಾದ ಮೇಲೆ ಸ್ವಾಗತ ಭಾಷಣ ನಮ್ಮ ಸಹದ್ಯೋಗಿ ಲಕ್ಷ್ಮಿ ಸಿದ್ದಪ್ಪ  ಅವರಿಂದ ...   ನಮ್ಮ ಸಂಸ್ಥೆಯ ಮುಖ್ಯಸ್ಥ ರಾದ ಯೋಗೆನ್ ಸರ್,  ರವಿದಾಸ್ ನಾಯಕ್  ಹಾಗು ಶೇಷಾದ್ರಿ ಗಂಜೂರ್  ಅವರ ಚಿಕ್ಕದಾದ ಮತ್ತು ಚೊಕ್ಕದಾದ ಭಾಷಣ ಭಾವಾರ್ಥಪೂರ್ಣ ವಾಗಿತ್ತು
ತದನಂತರ ಬಂದಿದ್ದ ಅತಿಥಿಗಳಿಗೆ ಸನ್ಮಾನ ಕಾರ್ಯಕ್ರಮ ,  ಸಾಲುಮರದ ತಿಮ್ಮಕ್ಕ , ಸುದಾ ಬರಗೂರು  ಮಾತು ವನಸಿರಿ ಉಮೇಶ್ ಅವರಿಗೆ ಸನ್ಮಾನ ಕಾರ್ಯಕ್ರಮ.   ಇದರ ನಂತರ ಅಜ್ಜಿ ಸಾಲುಮರದ ತಿಮ್ಮಕ್ಕ ಅವರ ಪುಟ್ಟ ಭಾಷಣ ಎಲ್ಲರ ಕಣ್ಣು ತೆರೆಸಿತು.   ಅಂತ ಕಷ್ಟ ದಲ್ಲೂ ಬಡತನದಲ್ಲೂ ಮಕ್ಕಳಿಲ್ಲ ಎನ್ನುವ ಕೊರಗನ್ನ  ಗಿಡ ಮರ ಗಳನ್ನೂ ನೆಟ್ಟು ಪೋಷಿಸಿ ಅವುಗಳನ್ನೇ ಮಕ್ಕಳು ಅಂತ ಸಾಕಿ ಸಲಹಿದ ಕಥೆ ಕಣ್ಣಿಗೆ ಕಟ್ಟುವ ಹಾಗೆ ಹೇಳಿ, ನೆರೆದಿದ್ದ ಎಲ್ಲರಲ್ಲೂ ಒಂದು ಯೋಚನೆಯನ್ನು ಮೂಡಿಸಿದರು ಅಜ್ಜಿ.  
ಅಜ್ಜಿಯ ಹಾಗೆ ಅವರ ಮಗ ವನಸಿರಿ ಉಮೇಶ್ ಕೂಡ ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ ಇವರಿಗೂ ಕೂಡ ಅನೇಕ ಪ್ರಶಸ್ತಿ ಗಳು ಲಭಿಸಿವೆ.  ಅವರ ಪುಟ್ಟ ಭಾಷಣ , ಅವರು ತೊಟ್ಟ “ಪ್ರತಿ ದಿನ ಒಂದೊಂದು ಗಿಡ ನೆಟ್ಟು ಪೋಷಿಷ ಬೇಕು” ಅನ್ನುವ ಸಂಕಲ್ಪ ಎಲ್ಲರಲ್ಲೂ ನಾವು ಇದೇ ರೀತಿ ಮಾಡಬೇಕು ಅನ್ನುವ ಹಾಗೆ ವಿಚಾರ ಚಿಂತನವನ್ನು ಮಾಡಿತು.
ಇವರ ನಂತರ ಎಲ್ಲರೂ ಕಾಯುತ್ತಿದ್ದ ನಮ್ಮ ಸುಧಾ ಬರಗೂರ್ ಅವರ ಹಾಸ್ಯ ಸಂಜೆ ....   ಅದೇನು ಮೋಡಿ ಮಾಡ್ತಾರೋ ನಮ್ಮ ಸುದಮ್ಮ .....   ಅಬ್ಬಾ   ಅವರು ಹೇಳುತ್ತಿದ್ದ ಒಂದೊಂದು ನಗೆ ಚಟಾಕಿ ಕುಳಿತಿದ್ದ ಎಲ್ಲರಲ್ಲೂ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿ ಆನಂದದ ಕಡಲಲ್ಲಿ ತೇಲಿಸಿತು.   

ಇವರ ನಂತರ ನಮ್ಮ ಕಂಪನಿ ಸಹದ್ಯೋಗಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆ ಗೊಂಡವು.   ಮೊದಲಿಗೆ ಜಾನ್ ಮತ್ತು ಸ್ಮಿತಾ ನೆಡಿಸಿ ಕೊಟ್ಟ  ಡ್ಯಾನ್ಸ್ , ಎಲ್ಲ ಕನ್ನಡ ಅಭಿಮಾನದ ಹಾಡುಗಳನ್ನು ಒಳಗೊಂಡ ಉತ್ತಮ ನೃತ್ಯ ಸಂಯೋಜನೆ ಅದ್ಬುತ ವಾಗಿತ್ತು.   ತದನಂತರ  ಅನುಪ್ರಿಯ ಮತ್ತೆ ರಶ್ಮಿ ನಡೆಸಿಕೊಟ್ಟ ಗಲ್ಲು ಗಲ್ಲೆನುಥ ಹಾಡಿನ ನೃತ್ಯ ಸಂಯೋಜನೆ ಮನಸೂರೆಗೊಳಿಸಿತ್ತು.    ಇದಾದಮೇಲೆ ಮ್ಯಾಡ್  ಅಡ್ಸ್   ನಮ್ಮ ಅಬ್ದುಲ್ ಮತ್ತು ತಂಡದವರಿಂದ  ಮತ್ತೊಮ್ಮೆ ಹೊಟ್ಟೆ ಹುಣ್ಣಾಗಿಸಿ ನಗುವ ಹಾಗೆ ಮಾಡಿತು .   ಇದಾದಮೇಲೆ  ನಮ್ಮ ಟೀಂ ಅವರಿಂದ ಕರ್ನಾಟಕ ಸೊಬಗನ್ನು ಸಾರುವ ಫ್ಯಾಷನ್ ಶೋ.   ಮೈಸೂರು, ಹುಬ್ಬಳ್ಳಿ, ಮಂಗಳೂರು ಹಾಗು ಬಾಗಲಕೋಟೆ ಜಿಲ್ಲೆಗಳ ವೇಷ ಭೂಷಣ ಗಳ ನಡಿಗೆ  ತದನಂತರ ಒನಕೆ ಒಬ್ಬವ್ವ , ಕಿತ್ತೂರಿನ ಚೆನ್ನಮ್ಮ ಮತ್ತು ಭುವನೇಶ್ವರಿ ಫ್ಯಾಷನ್ ಶೋ ರವಿಕುಮಾರ್ ಅವರ ಸಂಯೋಜನೆಯಲ್ಲಿ  ಅದ್ಬುತವಾಗಿ ಮೂಡಿ ಎಲ್ಲರ ಚಪ್ಪಾಳೆ ಗಿಟ್ಟಿಸಿತು.  
ಮೊಹಮದ್ ಅಬ್ದುಲ್  ಹಾಡಿದ “ ಈ ಸಂಜೆ ಯಾಕಾಗಿದೆ”  ಹಾಡು  ಮತ್ತು ಹರ್ಷಿತ ಹಾಡಿದ “ಉಲ್ಲಾಸದ ಹೂಮಳೆ”  ಹಾಡು ತುಂಬ ಇಂಪಾಗಿ ಮನಸೂರೆಗೊಂಡಿತು... 
ಕೊನೆಯದಾಗಿ ಅಣಕು ಪ್ರದರ್ಶನ ನಮ್ಮ ಗುರು ಮತ್ತು ತಂಡದವರಿಂದ    ಹಾಗೆ ವಂದನಾರ್ಪಣೆ ನಮ್ಮ ಸಹದ್ಯೋಗಿ ಮಿತ್ರ ಮಂಜುನಾಥ್ ಅವರಿಂದ.   

ನಮ್ಮ ಕರ್ನಾಟಕದ ಹೆಮ್ಮೆಯ  ಧಾರವಾಡ ಪೇಡ ಮತ್ತು ಸುಬ್ಬಮ್ಮ ಅಂಗಡಿ ನಿಪ್ಪಟ್ಟು ಬಂದಿದ್ದ ಎಲ್ಲರ ಬಾಯಲ್ಲಿ ನೀರುರಿಸಿತ್ತು   ..... ಪರಿವರುಷ ನಂದಿನಿ ಪೇಡ ಕೊಡ್ತಾ ಇದ್ವಿ ,,, ಇದು ೧೦ನೆ ವರುಷ ಎಂದು ಧಾರವಾಡ ಪೇಡ  ಸ್ಪೆಷಲ್ ಆಗಿತ್ತು ......

ಎರಡು ದಿನಗಳಿಂದ ತಮ್ಮ ದೈನಂದಿನ ಕೆಲಸಗಳ ಜೊತೆಗೆ , ನಮ್ಮ ಈ ಕನ್ನಡ ಹಬ್ಬ ಕಾರ್ಯಕ್ರಮಕ್ಕೆ ಶ್ರಮಿಸಿದ ಎಲ್ಲ ಗೆಳೆಯರ ಬಳಗ ದವರಿದು ಧನ್ಯವಾದಗಳು   ಮುಖ್ಯವಾಗಿ, ಮನು ಗೌಡ, ಲಕ್ಷ್ಮಿ ಸಿದ್ದಪ್ಪ, ಉಮೇಶ್, ಸೂರಜ್. ಶೀಲಾ, ಮಂಜುನಾಥ್, ವಿನಯ್, ಅಭಿಜಿತ್,  ಇನ್ನು ತುಂಬ ಸ್ನೇಹಿತರಿಗೆ ನನ್ನ ಧನ್ಯವಾದಗಳು..

ಎಲ್ಲಾದರು ಇರು ಎಂತಾದರು ಇರು....   ಎಂದೆಂದಿಗೂ ನೀ ಕನ್ನಡಿಗನಾಗಿರು .....


ಜೈ ಕರ್ನಾಟಕ......

ಫೋಟೋಗ್ರಫಿ :- ಗುರುಪ್ರಸಾದ್, ಅನಂತ ಹಾಗು  ಸುಮತಿ 

ಸಂಪೂರ್ಣ ಕಿರುಚಿತ್ರ You Tube nalli :-  Kannada Habba 2016

ಪಟದ ಕುಣಿತ ಹಾಗು ಹುಲಿವೇಷ 

 














 ಯೋಗೆನ್ ಸರ್,  ರವಿದಾಸ್ ನಾಯಕ್  ಹಾಗು ಶೇಷಾದ್ರಿ ಗಂಜೂರ್  ಅವರ ಚಿಕ್ಕದಾದ ಮತ್ತು ಚೊಕ್ಕದಾದ ಭಾಷಣ

ಮೈಸೂರು ದಸರಾ ಮತ್ತು ಕರ್ನಾಟಕದ ಮದುವೆಯ ಸಂಪೂರ್ಣ ಪರಿಚಯ ಹೇಳುವ ಚಿಕ್ಕ ಬೊಂಬೆಗಳ ಪ್ರದರ್ಶನ








ಜಾನ್ ಮತ್ತು ಸ್ಮಿತಾ ನೆಡಿಸಿ ಕೊಟ್ಟ  ಡ್ಯಾನ್ಸ್ , ಎಲ್ಲ ಕನ್ನಡ ಅಭಿಮಾನದ ಹಾಡುಗಳನ್ನು ಒಳಗೊಂಡ ಉತ್ತಮ ನೃತ್ಯ ಸಂಯೋಜನೆ ಅದ್ಬುತ ವಾಗಿತ್ತು


ಕರ್ನಾಟಕ ಸೊಬಗನ್ನು ಸಾರುವ ಫ್ಯಾಷನ್ ಶೋ.   ಮೈಸೂರು, ಹುಬ್ಬಳ್ಳಿ, ಮಂಗಳೂರು ಹಾಗು ಬಾಗಲಕೋಟೆ ಜಿಲ್ಲೆಗಳ ವೇಷ ಭೂಷಣ ಗಳ ನಡಿಗೆ  ತದನಂತರ ಒನಕೆ ಒಬ್ಬವ್ವ , ಕಿತ್ತೂರಿನ ಚೆನ್ನಮ್ಮ ಮತ್ತು ಭುವನೇಶ್ವರಿ ಫ್ಯಾಷನ್ ಶೋ ರವಿಕುಮಾರ್ ಅವರ ಸಂಯೋಜನೆಯಲ್ಲಿ  ಅದ್ಬುತವಾಗಿ ಮೂಡಿ ಎಲ್ಲರ ಚಪ್ಪಾಳೆ ಗಿಟ್ಟಿಸಿತು.  


ಮೊಹಮದ್ ಅಬ್ದುಲ್  ಹಾಡಿದ “ ಈ ಸಂಜೆ ಯಾಕಾಗಿದೆ”  ಹಾಡು  ಮತ್ತು ಹರ್ಷಿತ ಹಾಡಿದ “ಉಲ್ಲಾಸದ ಹೂಮಳೆ”  ಹಾಡು ತುಂಬ ಇಂಪಾಗಿ ಮನಸೂರೆಗೊಂಡಿತು...  

ಅಣಕು ಪ್ರದರ್ಶನ ನಮ್ಮ ಗುರು ಮತ್ತು ತಂಡದವರಿಂದ 


ಸುಧಾ ಬರಗೂರ್ ಅವರ ಹಾಸ್ಯ ಸಂಜೆ 






 ಅನುಪ್ರಿಯ ಮತ್ತೆ ರಶ್ಮಿ ನಡೆಸಿಕೊಟ್ಟ ಗಲ್ಲು ಗಲ್ಲೆನುಥ ಹಾಡಿನ ನೃತ್ಯ ಸಂಯೋಜನೆ ಮನಸೂರೆಗೊಳಿಸಿತ್ತು




Monday, October 31, 2016

ದೀಪಾವಳಿ ಹಬ್ಬದ ಶುಭಾಶಯಗಳು

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ...........

ಮನೆಯಲ್ಲಿ ತೆಗೆದ ಕೆಲವು ಫೋಟೋಗಳು.....