ನಾನು ಹುಟ್ಟಿದ್ದು ಮತ್ತೆ ಬೆಳೆದಿದ್ದು ಕುಣಿಗಲ್ ಅನ್ನೋ ಪಟ್ಟಣದಲ್ಲಿ , ಒಂದು ಹದಿನೈದು ವರುಷದ ಕೆಳಗೆ ಓದು ,,,ಕೆಲಸದ ನಿಮಿತ್ತ , ಕುಣಿಗಲ್ ಊರನ್ನು ಬಿಟ್ಟು ಬೆಂಗಳೂರು ಸೇರಿದೆ. ಅವಾಗವಾಗ ಕುಣಿಗಲ್ ಕಡೆ ಹೋಗಿ ಬರ್ತಾ ಇದ್ದೆ. ಕಳೆದ ಕೆಲವು ವರ್ಷಗಳಿಂದ ಹೊಗಿರಲಿಲ್ಲ. ಹೋದ ಬಾನುವಾರ ನಮ್ಮ ಸ್ಕೂಲ್ ಹುಡುಗರ ಸ್ನೇಹ ಮಿಲನ ಕಾರ್ಯಕ್ರಮಕ್ಕೆ ಹೋಗಿದ್ದೆ..
ಹಾಗೆ ನಾನು ಆಟ ಆಡಿದ ಜಾಗ, ನಮ್ಮ ಹಳೇ ಮನೆ, ಫ್ರೆಂಡ್ಸ್ ಮನೆ, ಮಾರ್ಕೆಟ್ ಎಲ್ಲ ನೋಡಿ ಹಳೇ ನೆನಪಿನ ಅಂಗಳಕ್ಕೆ ಹೋಗಿ ಬಂದೆ ...
ಅದರಲ್ಲಿ ಒಂದು ನಮ್ಮ ಕುಣಿಗಲ್ ಕೆರೆ. ಇದರ ಮೇಲೆ ಒಂದು ಒಳ್ಳೆ ಜನಪದ ಹಾಡೇ ಇದೆ. "ಮೂಡಲ್ ಕುಣಿಗಲ್ ಕೆರೆ ನೋಡೋರಿಗ್ ಒಂದೈಭೋಗ"
ಎಷ್ಟು ಚೆಂದ ಗೊತ್ತ ನಮ್ ಕುಣಿಗಲ್ ಕೆರೆ ಏರಿ ಮೇಲೆ ಸುತ್ತಾಡೊಕೆ .. ಅವಾಗ ಮಳೆ ಬಂದು ಸುತ್ತ ಮುತ್ತಲಿನ ಕೆರೆ ತುಂಬಿ ಅದರ ನೀರು ನಮ್ಮ ಕುಣಿಗಲ್ ಕೆರೆಗೆ ಬರ್ತಾ ಇತ್ತು.. ಕೆರೆ ಫುಲ್ ತುಂಬಿದಾಗ ಆಹಾ ನೋಡೋಕೆ ಒಂದು ಆನಂದ ... ಅದರಲ್ಲೂ ಕೆರೆ ಕೊಡಿ (ಕೆರೆ ತುಂಬಿದಾಗ ಹೆಚ್ಚು ನೀರು ಹೊರಗೆ ಹೋಗುವುದಕ್ಕೆ ಮಾಡಿರುವ ಒಂದು ದಾರಿ) ಬಿದ್ದಾಗ ,, ಮನೆ ಮಂದಿಯೆಲ್ಲ ಕೂಡಿ ಕೆರೆ ಏರಿ ಮೇಲೆ ನೆಡೆದು ಕೊಂಡು ಅದನ್ನ ನೋಡೋಕೆ ಹೋಗ್ತಾ ಇದ್ವಿ. ಅದ್ಬುತ ಅದನ್ನು ವರ್ಣಿಸಲಿಕ್ಕೆ ಆಗದು.. ಅದು ಒಂದು ಜಾತ್ರೆ ಸಡಗರ ತರ ಇರ್ತಾ ಇತ್ತು...
ಇವಾಗ ಹೇಮಾವತಿ ನೀರು ಬಂದು ನಮ್ಮ ಕೆರೆ ತುಂಬುತ್ತಂತೆ . ಇವಾಗ ಹೋಗಿದ್ದಾಗ ಕಾಲು ಕೆರೆ ನೀರು ಇತ್ತು.. ಆದರೂ ಅದರ ಹಳೇ ಸೊಬಗನ್ನು ಕಳೆದು ಕೊಂಡ ಇಲ್ಲ.. ಇಷ್ಟ ಬಂದಷ್ಟು ಹೊತ್ತು ಅಲ್ಲಿ ಇದ್ದು,, ನನ್ನ ಹೆಂಡತಿ ಮತ್ತೆ ಮಗನಿಗೆ ಅದನ್ನೆಲ್ಲ ತೋರಿಸಿ ಬೆಂಗಳೂರಿನ ಕಡೆ ಹೊರಟು ಬಂದೆ ,, ಅದರ ಕೆಲವು ಫೋಟೋಗಳನ್ನು ಹಂಚಿಕೊಂಡ್ ಇದೇನೇ ನೋಡಿ ...
ಮೂಡಲ್ ಕುಣಿಗಲ್ ಕೆರೆ ನೋಡೋರಿಗ್ ಒಂದೈಭೋಗ
ಮೂಡಿ ಬರ್ತಾನೆ ಚಂದಿರಾಮ | ತಾನಂದನೋ |
ಅಂತಂತ್ರಿ ನೋಡೋರ್‌ಗೆ ಎಂಥ ಕುಣಿಗಲ್ ಕೆರೆ
ಸಂತೆ ಹಾದೀಲಿ ಕಲ್ಲುಕಟ್ಟೆ | ತಾನಂದನೋ |
ಬಾಳೆಯ ಹಣ್ಣಿನಂತೆ ಬಾಗಿದ್ ಕುಣಿಗಲ್ ಕೆರೆ
ಬಾವ ತಂದಾನೋ ಬಣ್ಣದ್ ಸೀರೆ | ತಾನಂದನೋ |
ನಿಂಬೆಯ ಹಣ್ಣಿನಂತೆ ತುಂಬಿದ್ ಕುಣಿಗಲ್ ಕೆರೆ
ಅಂದ ನೋಡಲು ಶಿವ ಬಂದ್ರು | ತಾನಂದನೋ |
ಅಂದನೆ ನೋಡಲು ಶಿವ ಬಂದ್ರು ಶಿವಮೊಗ್ಗಿ ಕಬ್ಬಕ್ಕಿ ಬಾಯ ಬಿಡುತಾವೆ
ಕಬ್ಬಕ್ಕಿನೆ ಬಾಯ ಬಿಡುತಾವೆ ಇಬ್ಬೀಡ ಗಬ್ಬದ ಹೊಂಬಾಳೆ ನಡುಗವೆ ||
ಹಾಕೋಕ್ ಒಂದ್‌ಹರಿಗೋಲು ನೂಕೋಕ್ ಒಂದ್‌ಊರುಗೋಲು
ಬೊಬ್ಬೆ ಹೊಡೆದಾವ ಬಾಳೆಮೀನು | ತಾನಂದನೋ |
ಬೊಬ್ಬೆನ ಹೊಡೆದಾವೆ ಬಾಳೆಮೀನು ಕೆರೆಯಾಗೆ ಗುಬ್ಬಿ ಸಾರಂಗ ನಗುತಾವೆ
ತಾನಂದನೋ ಗುಬ್ಬಿ ಸಾರಂಗ ನಗುತಾವೆ | ತಾನಂದನೋ |
(ಬಿ ಆರ್ ಛಾಯ ಅವರ ದ್ವನಿಯಲ್ಲಿ https://www.youtube.com/watch?v=ngG3YT7toK0 )