ಕಳೆದ ವಾರ ಸಂಗೀತ ವಿದ್ವಾನ್ ಬಾಲಮುರಳಿ ಕೃಷ್ಣನನ್ ಅವರ ಸಂಗೀತ ಸಂಜೆ ಕೇಳುವ ಸದಾವಕಾಶ ಸಿಕ್ಕಿತ್ತು, "ಭಾರತೀಯ ಸಾಮಗಾನ ಸಭರವರು" ಆಯೋಜಿಸಿದ್ದ ೫ ನೆ ವರ್ಷದ ಸಂಗೀತ ಉತ್ಸವದಲ್ಲಿ ಬಾಲಮುರಳಿ ಕೃಷ್ಣನ್ ರವರ ಕರ್ನಾಟಕ ಸಂಗೀತ ಕಾರ್ಯಕ್ರಮ ಶನಿವಾರ ಸಂಜೆ (೧೫-೦೨-೨೦೧೪) ಪಿಟೀಲು ಚೌಡಯ್ಯ ಭವನದಲ್ಲಿ ಇತ್ತು.. ಅಪಾರ ಸಂಗೀತ ಪ್ರೇಮಿಗಳ ಮುಂದೆ ಹರಿದುಬಂದ ಬಾಲಮುರಳಿ ಕೃಷ್ಣನ್ ರವರ ಗಾನಲಹರಿ ನೆರೆದಿದ್ದ ಎಲ್ಲರನ್ನು ಮೂಕಸ್ಮಿತರಾಗುವಂತೆ ಮಾಡಿತ್ತು .....
ಡಾಕ್ಟರ್ ಬಾಲಮುರಳಿ ಕೃಷ್ಣನ್ ಅವರಿಗೆ ಅವರೇ ಸಾಟಿ , ಕರ್ನಾಟಕ ಶಾಸ್ತ್ರಿಯ ಸಂಗೀತದ ಗಾನ ಗಂದರ್ವ ಶ್ರೀ ಮಂಗಳಪಲ್ಲಿ ಡಾ . ಬಾಲಮುರಳಿಕೃಷ್ಣರವರು ತಮ್ಮ ೧೫ನೆ ವಯಸ್ಸಿನಲ್ಲಿ ಮೊದಲ ಸಭಾಗಾನವನ್ನು ಹುಟ್ಟುರಾದ ಶಂಕರಗುಪ್ತಂನಲ್ಲಿ ನಡೆಸಿ ಕೊಟ್ಟಿದ್ದರಂತೆ ಅದಾದ ನಂತರ ಅದೆಷ್ಟೋ ಸಭೆಗಳು ನೆಡೆದಿವೆ .. ಇವರಿಗೆ ಬಂದ ಸನ್ಮಾನ ಬಿರುದುಗಳೆಷ್ಟೋ ಅದರಲ್ಲಿ ಭಾರತದ ಎರಡನೇ ಅತ್ಯುನ್ನತ ಪ್ರಶಸ್ತಿ "ಪದ್ಮ ವಿಭೂಷಣ " ಹಾಗು ಫ್ರಾನ್ಸ್ ನ ಅತ್ಯುನ್ನತ ಪ್ರಶಸ್ತಿಯಾದ "ಚಾವ್ಲಿರ್ " ಸಹ ಸೇರಿದೆ