Sunday, November 30, 2014

IT ಕಂಪನಿ ಯಲ್ಲಿ ಕನ್ನಡ ರಾಜ್ಯೋತ್ಸವದ ಕಲರವ

ನಮ್ಮ ಕಂಪನಿ  ಯಲ್ಲಿ  ಕನ್ನಡ  ರಾಜ್ಯೋತ್ಸವದ ಕಲರವ  ..... ನಮ್ಮ ಕಂಪನಿ ನಲ್ಲಿ ಕನ್ನಡ ಗೆಳೆಯರ ಬಳಗದವರು ೮ ನೆ ವರುಷದ ಅದ್ದೂರಿ ಕನ್ನಡ ರಾಜ್ಯೋತ್ಸವ ವನ್ನು ಇತ್ತೀಚಿಗೆ ಅಚರಿಸಿದರು...ವರುಷ ದಿಂದ ವರುಷಕ್ಕೆ ನಮ್ಮ ಕನ್ನಡ ರಾಜ್ಯೋತ್ಸವದ ಹಬ್ಬ ಇಮ್ಮಡಿ ಗೊಳ್ಳುತ್ತಿದೆ , ಬರಿ ಕನ್ನಡ ಅಥವಾ ಕರ್ನಾಟಕದ ಸಹದ್ಯೋಗಿಗಳು ಮಾತ್ರವಲ್ಲದೆ, ಬೇರೆ ಬೇರೆ ರಾಜ್ಯಗಳಿಂದ ಬಂದ ಸಹದ್ಯೋಗಿ ಮಿತ್ರರು ಪಾಲ್ಗೊಂಡು ನಮ್ಮ ನಾಡಿನ ಹಬ್ಬದಲ್ಲಿ ಮಿಂದು ಖುಷಿ ಪಟ್ಟರು , 

ಡೊಳ್ಳು ಕುಣಿತ , ವೀರ ಗಾಸೆ, ದೇವರ ಕುಣಿತ ಇವುಗಳಿಂದ ಶುರುವಾಗಿ ಕಾರ್ಯಕ್ರಮಕ್ಕೆ ಮೆರಗು ತಂದು ಕೊಟ್ಟಿತ್ತು ಈ ಸಾರಿ, ನಮ್ಮ ಹಾಸ್ಯ ನಟ ಮಿಮಿಕ್ರಿ ದಯಾನಂದ್ ಅವರ ನಗೆ ಕಚಗುಳಿ ಬಲು ಜೋರಿತ್ತು.. ಎಲ್ಲರೂ ಬಿದ್ದು ಬಿದ್ದು ನಕ್ಕಿ ಸುಸ್ತಾದರು, ಈ ವರುಷದ ಇನ್ನೊಂದು ವಿಶೇಷ ಏನು ಅಂದರೆ ನಮ್ಮ ಕಂಪನಿಯ ಹುಡುಗರು ಮತ್ತೆ ಹೊರಗಿನವು ಸೇರಿಕೊಂಡು ಮಾಡಿದ ಯಕ್ಷಗಾನ.. ಅದ್ಬುತ ತುಂಬ ಚೆನ್ನಾಗಿ ಮೂಡಿ ಬಂದಿತ್ತು , ಅದಾದ ಮೇಲೆ ಭರತನಾಟ್ಯ, ನಾಟಕ .. ಎಲ್ಲವೂ ಗಮನ ಸೆಳೆದವು, ಒಟ್ಟಿನಲ್ಲಿ ಒಂದು ಒಳ್ಳೆಯ ಕನ್ನಡ ಕಾರ್ಯಕ್ರಮ .... ಹಾಗೆ,ನಮ್ಮ ಕಂಪನಿ ನಲ್ಲಿ ಕೆಲಸ ಮಾಡಿಕೊಂಡು ಸಿನಿಮಾ ನಟನೆಯಲ್ಲಿ ಮಿಂಚುತ್ತಿರುವ ಯುವ ನಾಯಕ ನಟ ಪ್ರತಾಪ್ ನಾರಾಯಣ್ ಅವರು ಸಹ ತಮ್ಮ ಹೊಸ ಸಿನಿಮಾ "ಬೆಂಕಿಪೊಟ್ಟಣ" ದ ಬಗ್ಗೆ ಒಂದೆರಡು ಮಾತಾಡಿದರು .. ಒಬ್ಬ ಯುವ ನಾಯಕ ನಟ ನಮ್ಮ ಜೊತೆ ಇರುವುದೇ ನಮಗೆಲ್ಲ ಸಂತೋಷದ ವಿಷಯ , ಇಂಥ ಒಂದು ಕಾರ್ಯಕ್ರಮಕ್ಕೆ ನಮ್ಮ ಕಂಪನಿಯ ಆಡಳಿತ ಮಂಡಳಿಯಾ ಪ್ರೋತ್ಸಾಹಕ್ಕೆ ಅಭಿನಂದನೆಗಳು .. ಹಾಗು ಕಾರ್ಯಕ್ರಮಕ್ಕೆ ಒಂದು ತಿಂಗಳು ಮುಂಚಿನಿಂದ ಎಲ್ಲರನು ಒಟ್ಟುಗೂಡಿಸಿ, ಕಾರ್ಯಕ್ರಮದ ರೂಪು ರೇಷೆ ಗಳನ್ನೂ ಸಿದ್ದಪಡಿಸಿ ಎಲ್ಲರೂ ಸಂಬ್ರಮಿಸುವಂತೆ ಮಾಡಿದ ನಮ್ಮ ಕಂಪನಿಯ ಕನ್ನಡ ಬಳಗದ ಗೆಳೆಯರಾದ ನಾಗೇಶ್ ಪ್ರಭುಸ್ವಾಮಿ, ಮಾಹೇಶ್ ಕೋರ , ಹರೀಶ್, ಮನು ಗೌಡ, ಲಕ್ಷ್ಮಿ ಸಿದ್ದಪ್ಪ, ರಾಜ್ ವಿನೋದ್ ಗೌಡ, ಅಭಿಜಿತ್, ಹಾಗು ಎಲ್ಲ ಗೆಳೆಯರಿಗೂ ಅಭಿನಂದನೆಗಳು .....



























Friday, September 5, 2014

ಮೂಡಲ್ ಕುಣಿಗಲ್ ಕೆರೆ

ನಾನು ಹುಟ್ಟಿದ್ದು ಮತ್ತೆ ಬೆಳೆದಿದ್ದು ಕುಣಿಗಲ್ ಅನ್ನೋ ಪಟ್ಟಣದಲ್ಲಿ , ಒಂದು ಹದಿನೈದು ವರುಷದ ಕೆಳಗೆ ಓದು ,,,ಕೆಲಸದ ನಿಮಿತ್ತ , ಕುಣಿಗಲ್ ಊರನ್ನು ಬಿಟ್ಟು ಬೆಂಗಳೂರು ಸೇರಿದೆ. ಅವಾಗವಾಗ ಕುಣಿಗಲ್ ಕಡೆ ಹೋಗಿ ಬರ್ತಾ ಇದ್ದೆ. ಕಳೆದ ಕೆಲವು ವರ್ಷಗಳಿಂದ ಹೊಗಿರಲಿಲ್ಲ. ಹೋದ ಬಾನುವಾರ ನಮ್ಮ ಸ್ಕೂಲ್ ಹುಡುಗರ ಸ್ನೇಹ ಮಿಲನ ಕಾರ್ಯಕ್ರಮಕ್ಕೆ ಹೋಗಿದ್ದೆ..
ಹಾಗೆ ನಾನು ಆಟ ಆಡಿದ ಜಾಗ, ನಮ್ಮ ಹಳೇ ಮನೆ, ಫ್ರೆಂಡ್ಸ್ ಮನೆ, ಮಾರ್ಕೆಟ್ ಎಲ್ಲ ನೋಡಿ ಹಳೇ ನೆನಪಿನ ಅಂಗಳಕ್ಕೆ ಹೋಗಿ ಬಂದೆ ...
ಅದರಲ್ಲಿ ಒಂದು ನಮ್ಮ ಕುಣಿಗಲ್ ಕೆರೆ. ಇದರ ಮೇಲೆ ಒಂದು ಒಳ್ಳೆ ಜನಪದ ಹಾಡೇ ಇದೆ. "ಮೂಡಲ್ ಕುಣಿಗಲ್ ಕೆರೆ ನೋಡೋರಿಗ್ ಒಂದೈಭೋಗ"
ಎಷ್ಟು ಚೆಂದ ಗೊತ್ತ ನಮ್ ಕುಣಿಗಲ್ ಕೆರೆ ಏರಿ ಮೇಲೆ ಸುತ್ತಾಡೊಕೆ .. ಅವಾಗ ಮಳೆ ಬಂದು ಸುತ್ತ ಮುತ್ತಲಿನ ಕೆರೆ ತುಂಬಿ ಅದರ ನೀರು ನಮ್ಮ ಕುಣಿಗಲ್ ಕೆರೆಗೆ ಬರ್ತಾ ಇತ್ತು.. ಕೆರೆ ಫುಲ್ ತುಂಬಿದಾಗ ಆಹಾ ನೋಡೋಕೆ ಒಂದು ಆನಂದ ... ಅದರಲ್ಲೂ ಕೆರೆ ಕೊಡಿ (ಕೆರೆ ತುಂಬಿದಾಗ ಹೆಚ್ಚು ನೀರು ಹೊರಗೆ ಹೋಗುವುದಕ್ಕೆ ಮಾಡಿರುವ ಒಂದು ದಾರಿ) ಬಿದ್ದಾಗ ,, ಮನೆ ಮಂದಿಯೆಲ್ಲ ಕೂಡಿ ಕೆರೆ ಏರಿ ಮೇಲೆ ನೆಡೆದು ಕೊಂಡು ಅದನ್ನ ನೋಡೋಕೆ ಹೋಗ್ತಾ ಇದ್ವಿ. ಅದ್ಬುತ ಅದನ್ನು ವರ್ಣಿಸಲಿಕ್ಕೆ ಆಗದು.. ಅದು ಒಂದು ಜಾತ್ರೆ ಸಡಗರ ತರ ಇರ್ತಾ ಇತ್ತು...
ಇವಾಗ ಹೇಮಾವತಿ ನೀರು ಬಂದು ನಮ್ಮ ಕೆರೆ ತುಂಬುತ್ತಂತೆ . ಇವಾಗ ಹೋಗಿದ್ದಾಗ ಕಾಲು ಕೆರೆ ನೀರು ಇತ್ತು.. ಆದರೂ ಅದರ ಹಳೇ ಸೊಬಗನ್ನು ಕಳೆದು ಕೊಂಡ ಇಲ್ಲ.. ಇಷ್ಟ ಬಂದಷ್ಟು ಹೊತ್ತು ಅಲ್ಲಿ ಇದ್ದು,, ನನ್ನ ಹೆಂಡತಿ ಮತ್ತೆ ಮಗನಿಗೆ ಅದನ್ನೆಲ್ಲ ತೋರಿಸಿ ಬೆಂಗಳೂರಿನ ಕಡೆ ಹೊರಟು ಬಂದೆ ,, ಅದರ ಕೆಲವು ಫೋಟೋಗಳನ್ನು ಹಂಚಿಕೊಂಡ್ ಇದೇನೇ ನೋಡಿ ..
.




ಮೂಡಲ್ ಕುಣಿಗಲ್ ಕೆರೆ ನೋಡೋರಿಗ್ ಒಂದೈಭೋಗ

ಮೂಡಿ ಬರ್ತಾನೆ ಚಂದಿರಾಮ | ತಾನಂದನೋ |

ಅಂತಂತ್ರಿ ನೋಡೋರ್‌ಗೆ ಎಂಥ ಕುಣಿಗಲ್ ಕೆರೆ

ಸಂತೆ ಹಾದೀಲಿ ಕಲ್ಲುಕಟ್ಟೆ | ತಾನಂದನೋ |

ಬಾಳೆಯ ಹಣ್ಣಿನಂತೆ ಬಾಗಿದ್ ಕುಣಿಗಲ್ ಕೆರೆ

ಬಾವ ತಂದಾನೋ ಬಣ್ಣದ್ ಸೀರೆ | ತಾನಂದನೋ |

ನಿಂಬೆಯ ಹಣ್ಣಿನಂತೆ ತುಂಬಿದ್ ಕುಣಿಗಲ್ ಕೆರೆ

ಅಂದ ನೋಡಲು ಶಿವ ಬಂದ್ರು | ತಾನಂದನೋ |

ಅಂದನೆ ನೋಡಲು ಶಿವ ಬಂದ್ರು ಶಿವಮೊಗ್ಗಿ ಕಬ್ಬಕ್ಕಿ ಬಾಯ ಬಿಡುತಾವೆ

ಕಬ್ಬಕ್ಕಿನೆ ಬಾಯ ಬಿಡುತಾವೆ ಇಬ್ಬೀಡ ಗಬ್ಬದ ಹೊಂಬಾಳೆ ನಡುಗವೆ ||

ಹಾಕೋಕ್ ಒಂದ್‌ಹರಿಗೋಲು ನೂಕೋಕ್ ಒಂದ್‌ಊರುಗೋಲು

ಬೊಬ್ಬೆ ಹೊಡೆದಾವ ಬಾಳೆಮೀನು | ತಾನಂದನೋ |

ಬೊಬ್ಬೆನ ಹೊಡೆದಾವೆ ಬಾಳೆಮೀನು ಕೆರೆಯಾಗೆ ಗುಬ್ಬಿ ಸಾರಂಗ ನಗುತಾವೆ

ತಾನಂದನೋ ಗುಬ್ಬಿ ಸಾರಂಗ ನಗುತಾವೆ | ತಾನಂದನೋ |


(ಬಿ ಆರ್ ಛಾಯ ಅವರ ದ್ವನಿಯಲ್ಲಿ https://www.youtube.com/watch?v=ngG3YT7toK0  )













Monday, February 17, 2014

ಡಾ . ಬಾಲಮುರಳಿ ಕೃಷ್ಣನ್ ಸಂಗೀತ ಸಂಜೆ



ಕಳೆದ ವಾರ ಸಂಗೀತ ವಿದ್ವಾನ್ ಬಾಲಮುರಳಿ ಕೃಷ್ಣನನ್ ಅವರ ಸಂಗೀತ ಸಂಜೆ ಕೇಳುವ ಸದಾವಕಾಶ  ಸಿಕ್ಕಿತ್ತು, "ಭಾರತೀಯ ಸಾಮಗಾನ ಸಭರವರು" ಆಯೋಜಿಸಿದ್ದ ೫ ನೆ ವರ್ಷದ ಸಂಗೀತ ಉತ್ಸವದಲ್ಲಿ ಬಾಲಮುರಳಿ ಕೃಷ್ಣನ್ ರವರ ಕರ್ನಾಟಕ ಸಂಗೀತ ಕಾರ್ಯಕ್ರಮ ಶನಿವಾರ ಸಂಜೆ (೧೫-೦೨-೨೦೧೪) ಪಿಟೀಲು ಚೌಡಯ್ಯ ಭವನದಲ್ಲಿ ಇತ್ತು.. ಅಪಾರ ಸಂಗೀತ ಪ್ರೇಮಿಗಳ ಮುಂದೆ ಹರಿದುಬಂದ ಬಾಲಮುರಳಿ ಕೃಷ್ಣನ್ ರವರ ಗಾನಲಹರಿ ನೆರೆದಿದ್ದ ಎಲ್ಲರನ್ನು ಮೂಕಸ್ಮಿತರಾಗುವಂತೆ ಮಾಡಿತ್ತು .....
ಡಾಕ್ಟರ್ ಬಾಲಮುರಳಿ ಕೃಷ್ಣನ್ ಅವರಿಗೆ ಅವರೇ ಸಾಟಿ , ಕರ್ನಾಟಕ ಶಾಸ್ತ್ರಿಯ ಸಂಗೀತದ ಗಾನ ಗಂದರ್ವ ಶ್ರೀ ಮಂಗಳಪಲ್ಲಿ ಡಾ . ಬಾಲಮುರಳಿಕೃಷ್ಣರವರು ತಮ್ಮ ೧೫ನೆ ವಯಸ್ಸಿನಲ್ಲಿ ಮೊದಲ ಸಭಾಗಾನವನ್ನು ಹುಟ್ಟುರಾದ ಶಂಕರಗುಪ್ತಂನಲ್ಲಿ ನಡೆಸಿ ಕೊಟ್ಟಿದ್ದರಂತೆ ಅದಾದ ನಂತರ ಅದೆಷ್ಟೋ ಸಭೆಗಳು ನೆಡೆದಿವೆ .. ಇವರಿಗೆ ಬಂದ ಸನ್ಮಾನ ಬಿರುದುಗಳೆಷ್ಟೋ ಅದರಲ್ಲಿ ಭಾರತದ ಎರಡನೇ ಅತ್ಯುನ್ನತ ಪ್ರಶಸ್ತಿ "ಪದ್ಮ ವಿಭೂಷಣ " ಹಾಗು ಫ್ರಾನ್ಸ್ ನ ಅತ್ಯುನ್ನತ ಪ್ರಶಸ್ತಿಯಾದ "ಚಾವ್ಲಿರ್ " ಸಹ ಸೇರಿದೆ


ಕರ್ನಾಟಕ ಸಂಗೀತದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವೆಬ್ ಸೈಟ್ ನೋಡಿ.