Monday, December 13, 2010

ಪೆನ್ಸಿಲ್ ಲೆಡ್ ನಲ್ಲೆ ಅರಳುವ ಇವರ ಕಲೆ ಅದ್ಬುತ...


ನಮಸ್ಕಾರ....


ತುಂಬಾ ದಿನಗಳ ಬಳಿಕ, ನನ್ನ ನೆಚ್ಚಿನ ಬ್ಲಾಗ್ ಲೋಕದ ಕಡೆ ತಲೆ ಹಾಕ್ತಾ ಇದೇನೇ,,,, ಮದುವೆ ಗಲಾಟೆ, ಹಾಗು ಕೆಲಸದ ಒತ್ತಡಗಳ ನಡುವೆ.....ನನ್ನ ಈ ಹವ್ಯಾಸ ತಪ್ಪೇ ಹೋಗಿತ್ತು.....ಕಳೆದ ೨ ತಿಂಗಳಿನಿಂದ ನನ್ನ ಬ್ಲಾಗ್ ಅಪ್ಡೇಟ್ ಮಾಡೋದು ಇರಲಿ,,, ಬೇರೆಯವರ ಬ್ಲಾಗ್ ಅನ್ನು ಓದೋಕು ಟೈಮ್ ಇರಲಿಲ್ಲ..... ಕೊನೆಗೂ,, ಸ್ವಲ್ಪ ಫ್ರೀ ಮಾಡಿಕೊಂಡು ಇದರ ಕಡೆ ಬಂದಿದ್ದೇನೆ......

ನಮ್ಮ ಬ್ಲಾಗ್ ಸ್ನೇಹಿತರ ತುಂಬಾ ಒಳ್ಳೆಯ ಲೇಖನಗಳನ್ನು,, ಕವನಗಳನ್ನು ಮಿಸ್ ಮಾಡಿಕೊಂಡೆ ಅಂತ ಕಾಣುತ್ತೆ... ಇರಲಿ... ನಿದಾನಕ್ಕೆ ಸಮಯ ಸಿಕ್ಕಾಗ ,,, ನೋಡಿ ಪ್ರತಿಕ್ರಿಯಿಸುತ್ತೇನೆ .....

ಇವಾಗ ಮತ್ತದೇ ನನ್ನ ಹುಡುಕಾಟದ ಅದ್ಬುತ ವಿಸ್ಮಯಗಳ ವಿಚಾರಗಳೊಂದಿಗೆ ನಿಮ್ಮ ಮುಂದೆ ಬರ್ತಾ ಇದೇನೇ...

ನನ್ನ ಹಿಂದಿನ ಬ್ಲಾಗ್ ಗಳಲ್ಲಿ... ಪೆನ್ಸಿಲ್ ನ ಚಿತ್ತಾರದ.. ಪೆನ್ಸಿಲ್ ಅನ್ನೇ ಉಪಯೋಗಿಸಿ ಅದರಿಂದ ಮಾಡಿದ ಕಲಾಕ್ರುತಿಗಳನ್ನ ಹಾಗು ಅದರ ಬಗ್ಗೆ ಹೇಳಿದ್ದೆ( http://guruprsad.blogspot.com/2009/10/blog-post_22.html).... ಅಲ್ವ... ಹಾಗೆ ಇಲ್ಲಿ ನೋಡಿ, ಯಾರೋ ಒಬ್ಬ ಭೂಪ,,, ಪೆನ್ಸಿಲ್ ಮುಂದಿನ ಲೆಡ್ ನಿಂದಲೇ ಬೆರಗಾಗುವ ರೀತಿನಲ್ಲಿ ತನ್ನ ಕಲೆ ಯನ್ನು ಒರೆಗೆ ಹಚ್ಚಿದ್ದಾನೆ,,,, , ಅಕ್ಕಿ ಕಾಳಿನಲ್ಲಿ ಹೆಸರು ಬರೆಯೋದನ್ನು,,, ಗೋದಿ ಕಾಳಿನಲ್ಲಿ ಹೆಸರು ಬರೆಯೋದನ್ನು,,, ನೋಡಿದ್ದೇವೆ,,, ಆದರೆ ಚಿಕ್ಕ ಪೆನ್ಸಿಲ್ ಮುಂದಿನ ಲೆಡ್ ನಿಂದಲೇ,,,, ಅದ್ಬುತ ಎನಿಸುವ ಕಲೆಗಳನ್ನ ಮಾಡಿ ತನ್ನ ಚಮತ್ಕಾರ ತೋರಿಸಿರುವುದನ್ನು ನೋಡಿದ್ದೀರಾ.... ... ಪೆನ್ಸಿಲ್ ನ ಉಪಯೋಗಿಸಿಕೊಂಡೆ ಎಷ್ಟು ಒಳ್ಳೆಯ ಕಲಾಕೃತಿಗಳನ್ನ ಮಾಡುತ್ತಾರೆ ನೋಡಿ.... ಎಷ್ಟು ವಿಸ್ಮಯ ಅಲ್ವ....

ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ....