Sunday, October 5, 2008

ಕೊಡಚಾದ್ರಿ ಟ್ರೆಕಿಂಗ್ ಅನುಭವಗಳು ಭಾಗ ೨













ಮೊದಲೇ ಹೇಳಿದ ಹಾಗೆ, ಕೊಡಚಾದ್ರಿ ಯಲ್ಲಿ , ಸೂರ್ಯಾಸ್ತ ಮತ್ತೆ ಸೂರ್ಯೋದಯ ನೋಡುವುದಕ್ಕೆ ತುಂಬ ಚೆನ್ನಾಗಿರುತ್ತೆ , ಅದಕ್ಕೋಸ್ಕರ ವ್ಯೂ ಪಾಯಿಂಟ್ ಇದೆ, ಬೆಟ್ಟದ ತಪ್ಪಲಿನಿಂದ ೧೩ KM ದೂರದಲ್ಲಿ ಇದೆ ಇ ವ್ಯೂ ಪಾಯಿಂಟ್ , ಬೆಟ್ಟದ ತಪ್ಪಲಿನಿಂದ ಮೇಲಕ್ಕೆ ಹೋಗೋಕೆ ೨ ದಾರಿಗಳು ಇದೆ, ಒಂದು ಟ್ರೆಕ್ಕಿಂಗ್ ಮಾಡ್ಕೊಂಡು ಹೋಗಬಹುದು, ಮತ್ತೆ ಜೀಪ್ ನಲ್ಲಿ ಹೋಗಬಹುದು , ಬೇರೆ ವಾಹನಗಳು ಹೋಗುವಸ್ತ್ತು ರಸ್ತೆ ಚೆನ್ನಾಗಿಲ್ಲ, ತುಂಬ ಕಡಿದಾದ ರಸ್ತೆ , ಬರೀ ಕಲ್ಲು ಮತ್ತೆ ಗುಂಡಿಗಳು ಜಾಸ್ತಿ ಇದೆ, ಕೆಳಗಡೆ ಇಂದಾನೆ ಜೀಪ್ ಬಾಡಿಗೆಗೆ ಸಿಗುತ್ತೆ, ಒಬ್ಬರಿಗೆ ೧೫೦ Rs ಚಾರ್ಜ್ ಮಾಡ್ತಾರೆ , ನೆಡೆದು ಕೊಂಡು ಹೋಗಲಿಕ್ಕೆ ಆಗದೆ ಇರುವವರು ಜೀಪ್ ನಲ್ಲಿ ಹೋಗಬಹುದು,









ಕೊಡಚಾದ್ರಿ ಬೆಟ್ಟಕ್ಕೆ ಹೋಗುವ ತಿರುವಿನಲ್ಲಿ ಒಂದು ಕಾಕಾ ಅಂಗಡಿ ಇದೆ, ಅವರಿಗೆ ಹೇಳಿದರೆ ಜೀಪ್ ಅನುಕೂಲ ಮಾಡಿ ಕೊಡುತ್ತಾರೆ , ಅದು ಅಲ್ಲದೆ, ಕೊಲ್ಲೂರು ಮೂಕಾಂಬಿಕೆ deevasthaanadind, ತುಂಬ ಜನ ಕೇರಳ ದವರು ಇ ಬೆಟ್ಟಕೆ ಹೋಗಿ ಬರುತ್ತಿರುತಾರೆ, ಬೇಕಾದರೆ ಅ ಜೀಪ್ ನಲ್ಲೂ ಕೂಡ ಹೋಗಬಹುದು, ಆದರೆ ಸ್ವಂತ ವಾಹನವನ್ನು ಬೆಟ್ಟದ ಮೇಲಿನ ತನಕ ತೆಗೆದು ಕೊಂಡು ಹೋಗುವುದಕ್ಕೆ ಆಗುವದಿಲ್ಲ.











ನಾವು ಕೂಡ, ನಮ್ಮ ವಾಹನವನ್ನು ಅಲ್ಲಿಯೇ ನಿಲ್ಲಿಸಿ, ಬೆಟ್ಟದ ಮೇಲಕ್ಕೆ ಜೀಪ್ ನಲ್ಲಿ ಹೋದೆವು, mಹೋಗಿದ್ದು ಜನವರಿ - ಫೆಬ್ರವರಿ ನಲ್ಲಿ , ಇ ಸಮಯದಲ್ಲಿ ರೋಡಿನ ತುmba ಧೂಳು ಇರುತ್ತೆ, ಅದಕ್ಕೆ ನಾವು ಬೆಟ್ಟದ ತಪ್ಪಲಿನಿದ ಟ್ರೆಕ್ಕಿಂಗ್ ಮಾಡೋಕೆ ಆಗಲಿಲ್ಲಾ, ಅದೇ ಚಳಿಗಾಲದಲ್ಲಿ ಹೋಗಿದ್ದಾಗ ತುಂಬ ಚೆನ್ನಾಗಿ ಇತ್ತು, ಮಳೆ, ಮಂಜು ಮೋಡ... ಇವುಗಳ ಜೊತೆಗೆ ನಾವು ಟ್ರೆಕಿಂಗ್ ಮಾಡಿಕೊಂಡು ಹೋಗಿದೆವು (ಅದರ ಅನುಭವವನ್ನು ಬೇರೆ ದಿನ ಹೇಳುತ್ತೇನೆ)
ನಾವುಗಳು ಮಧ್ಯಾನ್ಹ ಹೊರೆತು ಸಂಜೆ ಹೊತ್ತಿಗೆ ಬೆಟ್ಟ ಮೇಲೆ ಇರುವ ಗೆಸ್ಟ್ ಹೌಸೆಗೆ ಬಂದು ಸೇರಿದೆವು, ಆಗಲೇ ತುಂಬ ಜನ ಟ್ರೆಕ್ಕಿಂಗ್ ಮಾಡಿಕೊಂಡು ಅಲ್ಲಿ ಸೇರಿದ್ದರು, ಅಲ್ಲಿಗೆ ಬರುವ ಮೊದಲೇ ರೂಮ್ ಬುಕ್ ಮಾಡಿದ್ದರಿಂದ ಅಸ್ತೆನು ತೊಂದರೆ ಆಗಲಿಲ್ಲಾ. ಗೆಸ್ಟ್ ಹೌಸೆನಿಂದ ವ್ಯೂ ಪಾಯಿಂಟ್ ತಲುಪಲು ೩ ಕಿಲೋಮೀಟರ್ ನಡೆದುಕೊಂಡು ಬೇರೆ ಬೆಟ್ಟ ಹತ್ತಿ ಹೋಗಬೇಕು, ನಾನು ಮತ್ತೆ ನನ್ನ ಫ್ರೆಂಡ್ಸ್ ಹೇಗಾದರೂ ಮಾಡಿ ಸುರ್ಯಸ್ತಮ ದೃಶ್ಯ ವನ್ನು ನೋಡಲೇ ಬೇಕು ಅಂಥ ಹಠ ಮಾಡಿ ಅಲ್ಲಿಗೆ ಹೋಗಿ ಸೇರಿದೆವು,,
ನಿಜವಾಗಲು ಆ ಸುರ್ಯಸ್ತಮದ ದೃಶ್ಯ ತುಂಬ ಚೆನ್ನಾಗಿ ಇತ್ತು, ನನ್ನ ಕಣ್ಣು ತುಂಬ ನೋಡಿ ಆನಂದ ಆಯಿತು.
ಮುಳುಗುತಿರುವ ಸೂರ್ಯನ ಜೊತೆ ನಮ್ಮ ಆಟ ಹಗೆ ಸಾಗಿತ್ತು ....... ಅದರ ಕೆಲವು ಫೋಟೋಗಳು ಇಲ್ಲೇ ಇದೆ ನೋಡಿ....