Monday, September 29, 2008
ಕೊಡಚಾದ್ರಿ ಟ್ರೆಕ್ಕಿಂಗ್ ಅನುಭವಗಳು
ಕೊಡಚಾದ್ರಿ, ಒಂದು ಸುಂದರ, ನಯನ ಮನೋಹರವಾದ ಬೆಟ್ಟ. ಮೊದಲು ತುಂಬ ಜನರಿಗೆ ಇದು ಗೊತ್ತಿರಲಿಲ್ಲ, ಆದರೆ ಗಾಳಿಪಟ ಸಿನಿಮ ದಿಂದ ತುಂಬ famous ಆಗಿದೆ.
ನಾನಂತು ೨ ಸಲ ಕೊಡಚಾದ್ರಿಗೆ ಟ್ರೆಕ್ಕಿಂಗ್ ಮಾಡಿ ಬಂದಿದ್ದೇನೆ, ಒಂದು ಸರಿ ಚಳಿಗಾಲದಲ್ಲಿ ಹೋಗಿದ್ದೆ ಮತ್ತೊಂದು ಸಲ ಬೇಸಿಗೆ ನಲ್ಲಿ ಹೋಗಿದ್ವಿ,
ಚಳಿಗಾಲದಲ್ಲಿ ಅಂದ್ರೆ ನವೆಂಬರ್ ಮತ್ತೆ ಡಿಸೆಂಬರ್ ಟೈಮ್ ನಲ್ಲಿ ತುಂಬ ಚೆನ್ನಾಗಿರುತ್ತೆ.
ಇವಾಗ ನಾನು ಬೇಸಿಗೆ ನಲ್ಲಿ ಹೋದ ಟ್ರೆಕ್ಕಿಂಗ್ ಅನುಭವದ ಬಗ್ಗೆ ಹೇಳುತ್ತೇನೆ
ನಾವು ಒಟ್ಟು ೬ ಜನ ಸ್ನೇಹಿತರು ಟ್ರೆಕ್ಕಿಂಗ್ ಮಾಡಬೇಕು ಅಂಥ ಕೊಡಚಾದ್ರಿ ನ ಆರಿಸಿಕೊಂಡೆವು, ನಾನು ಮೊದಲೇ ಅಲ್ಲಿಗೆ ಒಂದು ಸರತಿ ಹೋಗಿ ಬಂದಿದ್ದರಿಂದ ಹೆಚ್ಚು ತೊಂದರೆ ಆಗಲಿಲ್ಲಾ, ಅಲ್ಲಿರುವ ಗೆಸ್ಟ್ ಹೌಸ್ನಲ್ಲಿ ಮೊದಲೇ ಒಂದು ರೂಮ್ ಅನ್ನು ಬುಕ್ ಮಾಡಿದೆ, ಮತ್ತೆ ಅಲ್ಲಿನ ಊಟ ತಿಂಡಿ ವ್ಯವಸ್ಥೆ ಬಗ್ಗೆ ಮೊದಲೇ ಎಲ್ಲರಿಗೂ ಹೇಳಿ ಕರೆಕ್ಟ್ ಪ್ಲಾನ್ ಮಾಡಿದ್ದೆ.
ಇಲ್ಲಿಂದ ಶುಕ್ರವಾರ ರಾತ್ರಿ ಹೊರಡೋದು ಅಂಥ ತೀರ್ಮಾನ ಮಾಡಿಕೊಂಡೆವು, ಅದೇ ರೀತಿ ಶುಕ್ರವಾರ ನಾನು ಬೇಗ ಕೆಲಸ ಮುಗಿಸಿಕೊಂಡು ಮನೆಗೆ ಬಂದೆ, ಮೊದಲೇ ಪ್ಯಾಕ್ ಮಾಡಿದ್ದ ಟ್ರೆಕ್ಕಿಂಗ್ ಲಗೇಜ್ ಅನ್ನು ತೆಗೆದುಕೊಂಡು, ಒಬ್ಬ ಒಬ್ಬ ಫ್ರೆಂಡ್ಸ್ ಗೂ ಫೋನ್ ಮಡಿ ಆಡಿದ ಆಗೋಕೆ ಹೇಳಿದೆ.... ಆದ್ರೆ ಏನ್ ಮಾಡೋದು ಎಲ್ಲ ಫ್ರೆಂಡ್ಸ್ ತುಂಬ ಸೋಮಾರಿಗಳು , ಎಲ್ಲರನ್ನು ರಾಜಾಜಿನಗರದ ಇನ್ನೊಬ್ಬ ಫ್ರೆಂಡ್ ಅಂಗಡಿ ಹತ್ರ ಬರೋಕೆ ಹೇಳಿದೆ, ಎಲ್ಲರಿಗೂ ಫೋನ್ ಮಾಡಿ ಉಗಿದ್ದಿದಕ್ಕೆ , ಏನೋ ಸ್ವಲ್ಪ ಹೆಚ್ಚು ಕಮ್ಮಿ ಸರಿಯಾದ ಸಮಯಕ್ಕೆ ಎಲ್ಲರೂ ಬಂದು ಸೇರಿದರು,
ಆಮೇಲೆ ಊಟ ನ ದಾರಿಯಲ್ಲಿ ಒಂದು ಹೋಟೆಲಿನಲ್ಲಿ ಮುಗಿಸಿಕೊಂಡು , ಅದು ಇದು ಮಾತಾಡಿಕೊಂಡು ಹೊರಟೆವು.....
ರಾತ್ರಿ ತುಂಬ ಹೂತ್ತು ಮಾತಾಡ್ತಾ ಮಾತಾಡ್ತಾ ನಾನಂತು ಯಾವಾಗ ನಿದ್ದೆ ಹೋಗಿದ್ನೋ ಗೊತ್ತೇ ಆಗಲಿಲ್ಲಾ, ಸ್ವಲ್ಪ ಎಚ್ಚ್ಚರ ಆಯಿತು ಹಾಗೆ ಹೊರಗಡೆ ನೋಡಿದೆ,,, ಇನ್ನು ಬೆಳಕು ಪೂರ್ತಿ ಆಗಿರಲಿಲ್ಲ, ಬೆಳಗಿನಜಾವ ೫:೪೦ ಆಗಿತ್ತು ಅಂಥ ಕಾಣುತ್ತೆ ,... ಕಾರ್ ನಲ್ಲಿ ಎಲ್ಲ ನಿದ್ದೆ ಹೋಗ್ತಾ ಇದ್ರೂ, ಹೊರಗಡೆ ಚುಮು ಚುಮು ಚಳಿ , ದತ್ತ ಮಂಜು ಅದರೊಳಗಿನಿಂದ ಸೂರ್ಯ ಇಣುಕಿ ನೋಡುವುದಕ್ಕೆ ಕಾಯುತ್ತ ಇದ್ದಾ. ಡ್ರೈವ್ ಸೀಟ್ ನಲ್ಲಿ ಕುಳಿತಿದ್ದ ಪ್ರಮೋದ್ ನ ಕೇಳಿದೆ , ಯಾವ ಉರೋ ಇದು,, ಎಲ್ಲಿ ಇದ್ದೇವೆ ನಾವು ಅಂಥ, ಆಗ ಅವನು ಹೇಳಿದ,, ಶಿವಮೊಗ್ಗ ದಾಟಿ ಸ್ವಲ್ಪ ಸಮಯ ಆಯಿತು ಕಣೋ.. ಇವಾಗ ತೀರ್ಥ ಹಳ್ಳಿ ಕಡೆ ಹೋಗ್ತಾ ಇದೇವೆ ಅಂದ ... ಅಗವ್ಗ್ಲೆ ನಾನು ಅಂದ್ಕೊಂಡೆ ಮಲೆನಾಡ ಮಡಿಲಿನಲ್ಲಿ ಇದ್ದೇವೆ ಅಂಥ... ಕೂಡಲೇ ಅವನಿಗೆ ಹೇಳಿದೆ,, ಇಲ್ಲೇ ಎಲ್ಲಾದರು ಕಾರ್ ನ ನಿಲ್ಲಿಸು, ಚುಮು ಚುಮು ಚಳಿ ನಲ್ಲಿ ಬಿಸಿ ಬಿಸಿ ಕಾಫಿ ಹಿರುತ ಹಾಗೆ ಸ್ವಲ್ಪ ಹೋತು ಇಲ್ಲೇ ಇರೋಣ ಅಂಥ.. ಅಲ್ಲೇ ಮುಂದೆ ಇರುವ ಒಂದು ಕಾಫಿ ಅಂಗಡಿ ಮುಂದೆ ಕಾರ್ ನಿಲ್ಲಿಸಿದ್ವಿ , ಒಳಗಡೆ ಇರೋವ್ರಿಗೆ ಯಾರಿಗೂ ಎದ್ದು ಬರೋಕೆ ಮನಸ್ಸು ಇರಲಿಲ್ಲ ಅಂಥ ಕಾಣುತ್ತೆ ಪಾಪ ಎಲ್ಲರೂ ಬೆಳಗಿನ ಸವಿ ನಿದ್ರೆಯಲ್ಲಿ ಬೆಚ್ಚಗೆ ಮಲ್ಕೊಂಡ್ ಬಿಟ್ಟಿದ್ರು .... ನಾನು ಸ್ನೇಹಿತರು ಬಿಸಿ ಬಿಸಿ ಕಾಫಿ ಕುಡಿತ ಹಾಗೆ ದಟ್ಟವಾದ ಮಂಜಿನ ನಲ್ಲಿ ನೆಡೆದು ಕೊಂಡು ಹೋಗ್ತಾ ಇದ್ವಿ,
ಬೆಂಗಳೂರಿನ ಕಾಂಕ್ರೆಟ್ ಕಾಡಿನಲ್ಲಿ ಇದ್ದ ನನಗೆ ಇಲ್ಲಿನ ವಾತಾವರಣ ತುಂಬ ಉಲ್ಲಾಸ ವಾಗಿ ಇತ್ತು, ಸ್ವಲ್ಪ ಹೊತ್ತು ಅಲ್ಲೇ ಅಡ್ಡಾಡಿ ಹಾಗೆ ಹಿಂದಿರುಗಿ ಬಂದು ಕಾರಿನಲ್ಲಿ ಕುಳಿತು ಹೊರಟೆವು,
ಇನ್ನು ಪೂರ್ತ ಬೆಳಕು ಹರಿದಿರಲಿಲ್ಲ, ನಾನು ಹೇಳಿದೆ, ಇನ್ನು ಸ್ವಲ್ಪ ಹೊತ್ತು ಇಲ್ಲೇ ಇರಬೇಕು ಅಂಥ ಅನ್ನಿಸ್ತ ಇದೆ ಮುಂದೆ ಯಾವುದಾದರು ಒಳ್ಳೆ ಜಾಗ ನೋಡಿ ಕಾರ್ ನಿಲ್ಲಿಸು ಅಂಥ ಹೇಳಿದೆ , ಮುಂಜಾನೆಯ ಮಂಜಿನ ಸೊಬಗನ್ನು ಸ್ವಲ್ಪ ಹೊತ್ತು ಅನುಭವಿಸಿ ಹೋಗೋಣ ಅಂಥ... ಹಾಗೆ ಒಂದು ಕಡೆ ಒಳ್ಳೆ ಜಾಗ ಸಿಕ್ಕಿತು. ಒಂದು ಚಿಕ್ಕ ಕೆರೆ, ಏನು ಕಾಣಿಸದಂತೆ ಕವಿದಿರುವ ದಟ್ಟನೆಯ ಮಂಜು... ....... ಬರಲೋ ಬೇಡವೋ ಅಂಥ ಆಟ ಆಡುತಿರುವ ಮಿಸ್ಟರ್ ಸೂರ್ಯ......... ಅಹಾ ನನಗಂತು ಅ ಕ್ಷಣದಲ್ಲಿ ಅದ ಸಂತೋಷ (ಹೇಗೆ ಹೇಳಲಿ) ಹೇಳೋಕೆ ಆಗೋಲ್ಲ..
ಕಾರಿನಿಂದ ಇಳಿದು,, ನನ್ನ ಕ್ಯಾಮೆರಾ ತೆಗೆದುಕೊಂಡು,, ಮಂಜಿನ ಮಬ್ಬನ್ನು ಸೀಳಿಕೊಂಡು ಹಾಗೆ ಸ್ವಲ್ಪ ದೂರ ನೆಡೆದು ಕೊಂಡು ಹೋದೆ .......
ಕಾರಿನಲ್ಲಿ ಇದ್ದ ಫ್ರೆಂಡ್ಸ್ ಎಲ್ಲ ಹೊರಗಡೆ ಇಳಿದು ಮಲೆನಾಡಿನ ಮುಂಜಾನೆಯ ಸೊಬಗನ್ನು ಸವಿಯುವುದಕ್ಕೆ ಶುರು ಮಾಡಿದ್ರು, ಯಾರಿಗೆ ತಾನೆ ಖುಷಿ ಆಗೋದಿಲ್ಲ ಹೇಳಿ....... ಮಂಜು ಕರಗುವ ತನಕ,, ಅಲ್ಲೇ ನಮ್ಮ ಠಿಕಾಣಿ ,, ಎಷ್ಟು ಹೊತ್ತು ಅಲ್ಲೇ ಇದ್ದೆವೋ ಗೊತ್ಹ್ಹೆ ಆಗಲಿಲ್ಲಾ,,,, ಆಮೇಲೆ ಟೈಮ್ ನೋಡಿಕೊಂಡರೆ , ೮ ಗಂಟೆ ಮೇಲೆ ಆಗಿತು,,, ಅಲ್ಲಿಂದ ಕೊಡಚಾದ್ರಿ,, ಇನ್ನು ೧೫೦ ಕಿಲೋಮಿತರ್ ದೂರ ಇತ್ತು , ಸರಿ ಅಂಥ ಎಲ್ಲರನ್ನು ಬೇಗ ಬೇಗ ಹೊರಡಿಸಿ, ದಾರಿಯಲ್ಲೇ ತಿಂಡಿ ತಿನ್ನೋಣ ಅಂಥ ಅಂದುಕೊಂಡು ಹೊರಟೆವು...
ಮುಂದೆ ................ ಕೊಡಚಾದ್ರಿ ಬೆಟ್ಟದ ತಪ್ಪಲು, ಬೆಟ್ಟ ಹತ್ತುವಾಗಿನ ಅನುಭವಗಳು. ಬೆಟ್ಟದ ಮೇಲಿನ ಸೂರ್ಯಾಸ್ತ ಮತ್ತೆ ಸೂರ್ಯೋದಯದ ರಮಣೀಯ ದೃಶ್ಯ, .........ಮುಂದುವರೆವುದು
Subscribe to:
Posts (Atom)