Thursday, September 22, 2011

ಸವಿ ಸವಿ ನೆನಪು ,,,,,, ಸಾವಿರ ನೆನಪು !!!!!

ಸವಿ ಸವಿ ನೆನಪು ,,,,,, ಸಾವಿರ ನೆನಪು..... ಎದೆಯಾಳದಲಿ ಬಚ್ಚಿಕೊಂಡಿರುವ ಅಚ್ಚಳಿಯದ ನೆನಪು.........

ಈ ಸಾಂಗ್ ಹಾಡ್ಕೊಂಡು ಸುದೀಪ್,,, ಅವನು ಓದಿದ ಸ್ಕೂಲ್, ಹಳ್ಳಿ... ಅಲ್ಲಿನ ಅನುಭವಗಳನ್ನ,,, ನೆನಪು ಮಾಡ್ಕೋತಾ ಇದ್ದ ಅಲ್ವ.... ಅದೇ ರೀತಿ,,, ನೆನಪು ಮಾಡಿಕೊಂಡು,,, ನಾನು ಓದಿದ ಸ್ಕೂಲ್ ನೆನ್ನ ಸುತ್ತಾಡಿಕೊಂಡು,,, ನಾನು ಓದುತ್ತ ಇದ್ದಾಗ ನನಗೆ ಪಾಠ ಹೇಳಿ ಕೊಟ್ಟ ನನ್ನ ಟೀಚೆರ್ಸ್ ನೆಲ್ಲ ಮಾತಾಡಿಸಿಕೊಂಡು,,,, ಹಳೆಯ ದಿನಗಳ ಅ ಕಾಲದ ಅನುಭವಗಳ ಮಧ್ಯ ಕಳೆದು ಹೋಗುವ ಅವಕಾಶ ನನಗೂ ಸಿಕ್ಕಿತ್ತು....

ಕಳೆದ ತಿಂಗಳು,,, 28 ನೆ ತಾರೀಕು , ನಾನು ಓದಿದ ಸ್ಕೂಲ್ ನಲ್ಲಿ,,, "ಸ್ನೇಹ ಮಿಲನ ಕಾರ್ಯಕ್ರಮ ವನ್ನು" ,, ನನ್ನ batch ನ ಹುಡುಗರು,, ಮತ್ತೆ ನನ್ನ seniors arrange ಮಾಡಿದ್ದರು... ವೌ,,, ನಾನಂತು ... ಈ ಕಾರ್ಯಕ್ರಮ ಇಷ್ಟು ಚೆನ್ನಾಗಿ ನಡೆಯುತ್ತೆ ಅಂತ expect ಮಾಡಿರಲಿಲ್ಲ,

ಅಂದ ಹಾಗೆ ನಾನು ಒದ್ದಿದು,,, St Rita , High School ... ಕುಣಿಗಲ್ ನಲ್ಲಿ.... ನಾನು ಹುಟ್ಟಿದು,, ಮತ್ತೆ ಬೆಳೆದದ್ದು ಎಲ್ಲಾ ಕುಣಿಗಲ್ ಅನ್ನೋ ಪುಟ್ಟ ಪಟ್ಟಣದಲ್ಲಿ... 17 ವರುಷ ನನ್ನ ಸಾಕಿ ಸಲಹಿದೆ,,, ಅದಕ್ಕಾಗಿ ನನಗೆ ಏನೋ ಒಂದು ತರ ನಂಟು ನನ್ನ ಊರಿನ ಬಗ್ಗೆ,,,

ನನ್ನ ಸ್ಕೂಲ್ ನಲ್ಲಿ ಆಗುವ ಸ್ನೇಹ ಮಿಲನ ಕಾರ್ಯಕ್ರಮದ ಬಗ್ಗೆ ನನ್ನ ಬಾಲ್ಯ ಸ್ನೇಹಿತರಿಂದ ಗೊತ್ತಾಗಿತ್ತು,,, ನಮ್ಮ ಸ್ಕೂಲ್ ನ , ನಮ್ಮ batch ನ,,, ಕೆಲವು ಹುಡುಗರು ಸೇರಬುದೇನೋ ಅಂತ ಅಂದುಕೊಂಡಿದ್ದೆ. ಆದರೆ ಅಲ್ಲಿ ಆ ದಿನ ಹೋಗಿ ನೋಡಿದಾಗ ,,, ನಮಗಿಂತ 20 ವರುಷ ಹಿಂದ batch students ಎಲ್ಲಾ ಬಂದು ಸೇರಿದ್ದರು,,, ಏನಿಲ್ಲ ಅಂದರು,,, ಒಂದು 600 old students ಸೇರಿದ್ದರೆನ್ನಬಹುದು .

ಆ ಭಾನುವಾರದ ಒಂದು ದಿನ ಹೇಗೆ ಕಳೆಯಿತು ಅಂತ ಗೊತ್ತೇ ಆಗಲಿಲ್ಲ..... ಎಲ್ಲರಿಗೂ ಒಂದು ರೀತಿ ಸಂತೋಷ,,, ಆನಂದ,,, ಖುಷಿ .....ಎಸ್ಟೋ ವರ್ಷಗಳ ಬಳಿಕ ತಮ್ಮ ಸ್ಕೂಲ್ ಸ್ನೇಹಿತ /ಸ್ನೇಹಿತೆಯರನ್ನು ಮಾತನಾಡಿಸುವ ಒಂದು ಅದ್ಬುತ ಅವಕಾಶ..... ವೌ... ನಿಜವಾಗಿಯೂ ಅಲ್ಲಿನ ಸಂಬ್ರಮವನ್ನ ನೋಡಿ ಅನಂದಿಸಬೇಕಾಗಿತ್ತು......

ಇದೆಲ್ಲಕಿಂತ ಮುಖ್ಯವಾಗಿ.... ನಮಗೆ ಚಿಕ್ಕವರಾಗಿದ್ದಾಗ ಪಾಠ ಹೇಳಿಕೊಟ್ಟ ಗುರುಗಳು,,ಟೀಚೆರ್ಸ್ . (systers ಇದು christrian ಸ್ಕೂಲ್ ಆಗಿದ್ದರಿಂದ ಎಲ್ಲರನ್ನು systers ಅಂತ ಕರಿತ ಇದ್ವಿ..) ಅವರನ್ನು ನೋಡಿ ಮಾತನಾಡಿಸುವ ಅವಕಾಶ... ಅಬ್ಬ,,,, ನಿಜವಾಗಲು,, ನಾವು ಎಲ್ಲವನ್ನು ಮರೆತು,, ೨೦ ವರುಷದ ಹಿಂದೆ,,, ನಮ್ಮ ಮಕ್ಕಳ ಲೋಕಕ್ಕೆ ಹೋಗಿ ಬಿಟ್ ಇದ್ದೆವು....

ಕಾರ್ಯಕ್ರಮ ಉದ್ಗಾಟನೆ ಬಳಿಕ... ಕೆಲವು ಹಳೆಯ students ಗಳ ಅನುಭವಗಳು... ಮತ್ತೆ ಇದೆ ಸ್ಕೂಲ್ ನಲ್ಲಿ ಓದಿ,, ಅಲ್ಲೇ ಟೀಚರ್ ಆಗಿರುವವರ ಅನಿಸಿಕೆಗಳು,,,, cultaral ಪ್ರೊಗ್ರಮ್ಸ್,, ಇದು ಯಾವುದರ ಅರಿವೆಯೇ ಇಲ್ಲದೆ,, ಅವರವರ batch ನ ಹುಡುಗರು,,, students ,, ಒಂದು ಕಡೆ ಸೇರಿ,,,ಗುಂಪು ಗುಂಪಾಗಿ ಹರಟೆ ಹೊಡಿತಾ ಇದ್ದರು..... ಒಟ್ಟಿನಲ್ಲಿ... ಅದೊಂದು ಅದ್ಬುತ ಗಳಿಗೆ.....



ನಾನಂತು... ನನ್ನ ಸ್ಚೂಲ್ನ,, ಕ್ಲಾಸ್ ರೂಂ ನ,, ಎಲ್ಲಾನು ನೋಡಿಕೊಂಡು,, ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡಿಕೊಂಡು , ನನ್ನ ಹಳೆಯ ಸ್ಕೂಲ್ mates ನ ಮಾತಾಡಿಸಿಕೊಂಡು,,, ಓಡಾಡಿದ್ದೆ ಓಡಾಡಿದ್ದು,,,

ಅದೆಲ್ಲ ಕಿಂತ ಮುಖ್ಯವಾಗಿ,,, ಅವರವರ batch ನ students ಎಲ್ಲಾ ಸೇರಿ,, ಅವರ ಟೀಚೆರ್ಸ್ ಗೆ, ನೆನಪಿನ ಕಾಣಿಕೆ ನೀಡಿದ್ದು,,,,, ಎಸ್ಟೋ students ,, ಇವಗ್ಲೂ ತಮ್ಮ ಗುರುಗಳ ಬಗ್ಗೆ ಬಕ್ತಿ , ಗೌರವ ದಿಂದ,, ಕಾಲಿಗೆ ಬಿದ್ದು,, ನಮಸ್ಕಾರ ಮಾಡಿದ್ದು,, ಕಣ್ಣಂಚಿನಲ್ಲಿ ನೀರನ್ನು ತುಂಬಿಸಿ ಕೊಂಡಿದ್ದು,,,, ಎಲ್ಲಾ ಟೀಚೆರ್ಸ್ ಜೊತೆ ಫೋಟೋ ತೆಗೆಸಿಕೊಳೋಕೆ ನಾ ಮುಂದು , ತಾ ಮುಂದು,, ಅಂತ ಮುಗಿ ಬಿತ ಇದ್ದದ್ದು,,,, ವೌ,,,,, ಸೂಪರ್,,,,



ನನಗಂತು ಒಂದು ವಿಷಯದಲ್ಲಿ,,, ತುಂಬಾ ಹೆಮ್ಮೆ ಆಯಿತು,, ಹಾಗೆ ಅಳು ಕೂಡ ಬಂತು,,, ೨೦ ವರ್ಷ ಆದಮೇಲೆ ಅಂದರೆ ನಾನು ನನ್ನ 7th ಸ್ಟ್ಯಾಂಡರ್ಡ್ ನ ಪಾಸ್ ಮಾಡಿಕೊಂಡ್ ಇದ್ದು,, 1992 -93 ನಲ್ಲಿ , ಇವಾಗ ಆಗಲೇ ೨೦ ವರುಷ ಆಗಿದೆ,,, ಅಂತದರಲ್ಲಿ,, ನನ್ನ ನೆಚ್ಚಿನ ಟೀಚರ್, ನನ್ನನ್ನು ಗುರುತು ಹಿಡಿದು ,, ನನ್ನ ಹೆಸರಿನಿಂದ ಮಾತನಾಡಿಸದ ಗಳಿಗೆ ನಿಜಕ್ಕೂ,,, ಗ್ರೇಟ್ .... ನನ್ನನು ಗುರುತು ಹಿಡಿತರೋ ಇಲ್ಲವೋ ಅಂತ ಅನ್ನ್ದುಕೊಂಡಿದ್ದೆ,, ಅದರಲ್ಲಿ,, ನನ್ನ ಹೆಸರು ಕೂಡ... ನೆನಪಿಟ್ಟು ಕೊಂಡು ಮಾತನಾಡಿಸಿದರಲ್ಲ,, ನನಗೆ ತುಂಬಾ ಖುಷಿ ಆಯಿತು,, ಅದಕ್ಕೆ ಇರಬೇಕು,, teachers ಮತ್ತೆ students ಸಂಬಂದ ಅನ್ನೋದು,,,,,

ಇದೆಲ್ಲ ಮುಗಿಯುವ ಹೊತ್ತಿಗೆ,, ಎಲ್ಲಾ batch students ನಿಂದ ಅಂದ್ರೆ 1979 -80 ಇಂದ ಹಿಡಿದು,, 2005 -2006 ವರೆವಿಗೂ,,, ಒಂದು ಸಾಂಗ್ ಗೆ ಡಾನ್ಸ್ ಮಾಡುವ ಒಂದು ಪ್ರೊಗ್ರಾಮ್,,, ಅಬ್ಬ ಎಷ್ಟು ಚೆನ್ನಾಗಿ ಇತ್ತು ಅಂದ್ರೆ,,, ವೌ... ವರ್ಣಿಸೋಕೆ ಅಗೊಲ್ಲ್ಲ... ಎಸ್ಟೋ ಜನಕ್ಕೆ ಮದುವೆ ಆಗಿ ಮಕ್ಕಳಗಿದ್ದಾರೆ,,, ಅದರೂ ಅವರೆಲ್ಲ stage ಮೇಲೆ ಬಂದ ಕೂಡಲೇ,,, ಚಿಕ್ಕ ಮಕ್ಕಳ ತರ ಡಾನ್ಸ್ ಆಡಿದ್ದೆ ಆಡಿದ್ದು,,, !!!!

ಇದೆಲ್ಲ ಮುಗಿಯುವ ಹೊತ್ತಿಗೆ,, ಸಂಜೆ ಆಗಿತ್ತು,,, ಅಲ್ಲೇ ಊಟದ ವ್ಯವಸ್ತೆ ಕೂಡ ಮಾಡಿದ್ದರು,,,, ಒಟ್ನಲ್ಲಿ,,, ಒಂದು ದಿನ,,, ನಾನು ೨೦ ವರ್ಷ ಹಿಂದೆ ಹೋಗಿ,,, ಚಿಕ್ಕ ಮಕ್ಕಳ ತರ ಆಟ ಅಡಿ,, ನನ್ನ ಹಳೆಯ ನೆನಪುಗಳನ್ನೆಲ್ಲ ತಿರುವಿಹಾಕಿ,,, ನನ್ನ ಸ್ಕೂಲ್ , ಕ್ಲಾಸ್, ರೂಂ, ಆಟದ ಮೈದಾನ,,, ನಾನು ನಾಟಕ ಅದಿದ್ದ stage ,,, HM ರೂಂ ಎಲ್ಲವನ್ನು ನೋಡಿ ಕೊಂಡು,, ವಾಪಸ್ ಬೆಂಗಳೂರಿಗೆ ಹೊರಟಾಗ ಸಂಜೆ ಆಗಿತ್ತು,,, ಅಲ್ಲಿಂದ ಬರೋಕೆ ಮನಸು ಆಗಲಿಲ್ಲ,,, ಅದರೂ ಕೆಲಸದ ಒತ್ತಡ,, ಅವೊತ್ತು ಏನೋ importent ಕಾಲ್ ಇತ್ತು ,, ಸೊ ಬೇಗ ಹೊರಟು ಬಂದೆ,,,,:-(



ಎಲ್ಲಾ ಚಿತ್ರಗಳನ್ನು ನನ್ನ ಪಿಕಾಸ ಆಲ್ಬಮ್ ನಲ್ಲಿ ಹಾಕಿದ್ದೇನೆ,,, ನೀವು ನೋಡಿ,,, ನನ್ನ ಹೆಮ್ಮೆಯ ಸ್ಕೂಲ್ ನ,,,, https://picasaweb.google.com/guru.prasadkr/September222011?authuser=0&feat=directlink





 ನನ್ನ ಸ್ಕೂಲ್.... ನಾನು ಡಾನ್ಸ್, ನಾಟಕ , ಚೆರ್ಚೆ ,,, ಡಿಬೇಟ್ ,,, ಮಾಡಿದ stage



                                                              ನಮ್ಮ ಟೀಚೆರ್ಸ್

ಆಪಾರ ಸಂಖ್ಯೆ ಯಲ್ಲಿ... ಸೇರಿರುವ ಸ್ಕೂಲ್ ನ, ಹಳೆಯ ವಿದ್ಯಾರ್ಥಿ ವಿಧ್ಯಾರ್ಥಿನಿಯರು,,,,,


ತಮ್ಮ ತಮ್ಮ ಹಳೆಯ ಸಹಪಾಟಿ ಗಳೊಂದಿಗೆ ಸಂವಾದ....


ಈಗಿನ students 

 ನಮ್ಮ ನೆಚ್ಚಿನ ಗುರುಗಳಿಗೆ,,, ನೆನಪಿನ ಕಾಣಿಕೆ.....

 ನಮ್ಮ Batch ನ students 
 ತಮ್ಮ ನೆಚ್ಚಿನ ಗುರುಗಳ ಕಾಲಿಗೆ,, ನಮಸ್ಕರಿಸುತ್ತಿರುವ ವಿದ್ಯಾರ್ಥಿಗಳು


ನಮ್ಮ ಕ್ಲಾಸ್ ನ students  ಗುಂಪು

 ಚಿಕ್ಕವನಾಗಿದ್ದಾಗ,, ನಾನು ಇದೆ stage  ಮೇಲೆ ಎಸ್ಟೋ ಡಾನ್ಸ್ , ನಾಟಕ ಗಳನ್ನ ಆಡಿದ್ದೇನೆ...

ಎಲ್ಲ ಟೀಚೆರ್ಸ್ ಜೊತೆ ನಮ್ಮ batch
ನಾನು ಓದುತ್ತಿದ್ದ 6th ಸ್ಟ್ಯಾಂಡರ್ಡ್ ಕ್ಲಾಸ್ ರೂಂ.......


ರಾಣಿ ಮಿಸ್, ಮತ್ತೆ PT ಮಾಸ್ಟರ್ ಜೊತೆ
ಟೀಚೆರ್ಸ್ ವೃಂದ......


    ಕೊನೆಯದಾಗಿ..... ನಮ್ಮ batch students  ಜೊತೆ,,,, ಹಳೆಯ ಕ್ಲಾಸ್ ರೂಂ ನಲ್ಲಿ,, 20  ವರುಷದ ಬಳಿಕ,,  ಎಲ್ಲರೂ ಒಂದೇ ಬೆಂಚ್ ನಲ್ಲಿ... ಇನ್ನು ಎಸ್ಟೋ ಜನ ಮಿಸ್ ಆಗಿದ್ದರು,,, ಸಧ್ಯ 15  students ಮಾತ್ರ ಸೇರಿದ್ದೆವು,,,,,