Thursday, January 13, 2011

Argentina ದೇಶದಲ್ಲಿ ನನ್ನ ಅನುಭವ......

Buenos Aires ಸಿಟಿಗೆ ಬಂದು ೧೦ days ಆಯಿತು.... ಆಗಲೇ ನನ್ ಯಾವಾಗ ಇಂಡಿಯಾಗೆ ವಾಪಾಸ್ ಬರ್ತೇನೋ ಅಂತ ಅನಿಸ್ತಾ ಇದೆ.... ಎಸ್ಟೆ ಅದ್ರು ನಮ್ಮ ಮನೆ ನಮ್ಮ ಊರೇ ಚೆಂದ ಅಲ್ವ.... ನನ್ನ ಪ್ರೀತಿಯ ಅಮ್ಮ ಮತ್ತೆ ಮುದ್ದಿನ ಹೆಂಡತಿಯನ್ನ ತುಂಬಾ ಮಿಸ್ ಮಾಡ್ಕೊಂಡ್,, ಡೈಲಿ ಅವರ ಜೊತೆ vedio ಚಾಟಿಂಗ್ ಮಾಡ್ಕೊಂಡ್ ಕಾಲ ಕಳಿತ ಇದೇನೇ ..... ಇನ್ನು ವಾಪಾಸ್ ಇಂಡಿಯಾಗೆ ಬರೋದು 20 ಡೇಸ್ ಇದ್ರೂ,,, ಕೌಂಟ್ ಡೌನ್ ಸ್ಟಾರ್ಟ್ ಆಗಿದೆ....

ಈ ಸರಿ assignment ನಲ್ಲಿ ನಾನು ಒಬ್ಬನೇ ಇಲ್ಲಿಗೆ ಬಂದಿರೋದು,,, ಹಾಗಾಗಿ ಸ್ವಲ್ಪ ಬೋರ್ ಆಗ್ತಾ ಇದೆ..... ಸಸ್ಯಹಾರಿಗಳಿಗೆ ಇಲ್ಲಂತೂ ಬದುಕಲಿಕ್ಕೆ ಆಗೋಲ್ಲ.... ಸಿಕ್ಕಾಪಟ್ಟೆ ಕಷ್ಟ ಇದೆ.... ಏನ್ ಮಾಡೋದು,, ನಾನು ಕೂಡ ಶುದ್ಧ ಸಸ್ಯಾಹಾರಿ ಪ್ರಾಣಿ..... ಅದಕ್ಕೆ ಅಂತ ಸರ್ವಿಸ್ ಅಪಾರ್ಟ್ಮೆಂಟ್ ಬುಕ್ ಮಾಡಿಸಿಕೊಂಡ್ ಇದ್ದೇನೆ ... ನನಗೆ ಬೇಕಾಗಿರೋ ಅಡುಗೆನ ಮಾಡಿಕೊಂಡ ತಿನ್ನೋಣ ಅಂತ.... ಅಲ್ಲಿಂದ ಬರೋವಗ್ಲೆ ಎಲ್ಲಾ ಮಸಾಲ ಸಾಮನುಗಳನ್ನ ತಂದಿದ್ದೆ. ಸೊ ಹೇಗೆ ಒಟ್ಟಿನಲ್ಲಿ ನಮ್ಮ ಅಡುಗೆ ಮಾಡಿಕೊಂಡು ದಿನ ಕಳಿತಾ ಇದೇನೇ.... :-)

ಈ ಲಾಸ್ಟ್ ೧೦ ಡೇಸ್ ನಲ್ಲಿ,,,,,ತುಂಬಾ ಕಡೆ ಸುತ್ತಾಡಿ ಬಿಟ್ ಇದ್ದೇನೆ , Argentaina ಕ್ಯಾಪಿಟಲ್ ಸಿಟಿ ,,, ಸುಂದರವಾದ ಊರು,,, ಎಷ್ಟು ನೀಟ್ ಆಗಿ ಇದೆ ಗೊತ್ತ.... ಸಿಟಿ ಏನೋ ತುಂಬಾ ಇಷ್ಟ ಆಯಿತು... ಇಲ್ಲಿಗೆ ಬಂದ ಕೂಡಲೇ ಎಲ್ಲರೂ ಹೇಳಿದ್ದು,,, ನಿನ್ನ ಕೈ ನಲ್ಲಿ ಇರೋ ಚಿನ್ನದ ಉಂಗುರ, watch , chain ಎಲ್ಲಾ ಹುಷಾರು ಅಂತ,,, ಹಾಗೆ ಪೆರ್ಸ್ ಕೂಡ.... ಹೊರಗಡೆ ಇಂದ ಬಂದಿರುವವರ ಹತ್ರ ಇಂತದ್ದು ಏನಾದ್ರು ಇದ್ರೆ,, ಕಳ್ಳತನ ಮಾಮುಲಂತೆ,,,, ಒಂದು ದಿನ ಆದಮೇಲೆ , ಎಲ್ಲಾ ಹೇಳಿದಾ ಮೇಲೆ,, ಫಸ್ಟ್ ಸೇಫ್ ಆಗಿ ತೆಗೆದಿಟ್ಟು ಬಿಟ್ ಇದ್ದೇನೆ,,,,, ಅವಾಗ ಅನ್ನ್ಕೊಂಡೆ ಇಲ್ಲೂ ಕೂಡ ನಮ್ ಇಂಡಿಯಾ ನಲ್ಲಿ ಇದ್ದ ಹಾಗೆ pickpacket ಕಳ್ಳತನ ಮಾಮೂಲು ಅಂತ.... :-)

ಇಲ್ಲಿ Mr sun , ಬೆಳಿಗ್ಗೆ 5 :00 ಗಂಟೆಗೆ ಎಲ್ಲಾ ಬಂದ್ಬಿಡ್ತಾನೆ ,,, ಮತ್ತೆ ವಾಪಾಸ್ ಹೋಗೋದು ರಾತ್ರಿ 8 :30 ಗೆ,,, ಇಲ್ಲಿ ರಾತ್ರಿ ೮:೩೦,,, ನಮ್ಮಲ್ಲಿ evening 5:30 ತರ ಇರುತ್ತೆ .. ಮೊದಮೊದಲು ಏನೋ ಒಂದು ತರ ಅನ್ನಿಸ್ತ ಇತ್ತು,, ಇವಾಗ ಅಡ್ಜಸ್ಟ್ ಆಗಿ ಬಿಟ್ ಇದೆ.... ಇದೊಂತ್ ತರ ಮಜಾ ಇರುತ್ತೆ.....

ದಿನಾಗಲು ಸಂಜೆ,,, ಆಫೀಸ್ ಮುಗಿಸಿಕೊಂಡು,,,, ಉರು ಸುತ್ತುತ್ತ ಇರುತ್ತೇನೆ,,,, ನೆಡೆದು ಕೊಂಡು ಸುತ್ತಾಡೋದು ಅಂದ್ರೆ ಏನೋ ಒಂದು ತರ ಇಷ್ಟ ನಂಗೆ,,, ಹಾಗೆ ಇಲ್ಲಿನ culture , people , ಅವರ ದಿನಚರಿ,, ಎಲ್ಲನನು ನೋಡ್ತಾ , ಹೇಗೆ ಇರುತ್ತಾರೆ ಇವರು ಅಂತ ತಿಳ್ಕೊಳ್ತಾ ಇದ್ದೇನೆ .....

ನಂಗೆ ದೊಡ್ಡ ಪ್ರಾಬ್ಲಮ್ ಆಗಿರೋ ಸಮಸ್ಯೆ ಅಂದ್ರೆ,,, ಭಾಷೆ,,,, ಇಲ್ಲಿ ಎಲ್ಲರೂ ಮಾತಾಡೋದು spanish .... ಎಲ್ಲಿ ನೋಡಿದರು,,, spanish ಮಯ.... sign board , tubes , bus ಎಲ್ಲಾ ಅದೇ... ನನಗಂತು ಮೊದಲೆರಡು ದಿನ ತುಂಬಾ ಪ್ರಾಬ್ಲಮ್ ಆಗಿ ಹೋಯ್ತು.... ಪಾಪಿಗಳು engilish ಮಾತಾಡದೆ ಇಲ್ಲ ಅಂತಾರೆ.... ನಮ್ಮ ಆಫೀಸ್ ನಲ್ಲಿ ಮಾತ್ರ english ಇದೆ...(ಸದ್ಯ ಬಚಾವು) ಆಮೇಲೆ ಅಪಾರ್ಟ್ಮೆಂಟ್ ನಲ್ಲಿ ಯಾವುದಾದರು ಒಂದು ವೆಬ್ ಸೈಟ್ ಓಪನ್ ಮಾಡಿದ್ರೆ spnaish ನಲ್ಲಿ ಓಪನ್ ಆಗುತ್ತೆ. ಆಮೇಲೆ ಕನ್ವರ್ಟ್ ಮಾಡಿಕೊಂಡ್ ಓದಬೇಕು..... ದೊಡ್ಡ LCD TV ಇದೆ.... ಏನ್ ಚಾನೆಲ್ ಹಾಕಿದರು,, ಸ್ಪಾನಿಶ್.... ನನ್ fav NGO ಅಂಡ್ ಅನಿಮಲ್ ಪ್ಲಾನೆಟ್ ಕೂಡ spanish ನಲ್ಲೆ ಬರುತ್ತೆ,,, ಎಲ್ಲೊ ಒಂದೆರಡು channels ಇಂಗ್ಲಿಷ್ ನಲ್ಲಿ ಇರುತ್ತೆ.

ಸೂಪರ್ ಮಾರ್ಕೆಟ್ ಗೆ ಹೋದಾಗ ಅಂತು ನನ್ ಪರಿಸ್ತಿತಿ ಬೇಡ.... ಎಲ್ಲಾ ಸ್ಪಾನಿಶ್,,, ಮತ್ತೆ ಅದರಲ್ಲಿ veg ಯಾವ್ದು non veg ಯಾವುದ ಅಂತ ಗೊತ್ತಾಗೋದೇ ಇಲ್ಲ... ನನ್ನ ಬ್ಲಾಕ್ ಬೆರಿ ನಲ್ಲಿ ಕನ್ವರ್ಟ್ ಮಾಡ್ಕೊಂಡ್ ಮಾಡ್ಕೊಂಡ್ ನಂಗೆ ಬೇಕಾಗಿರೋ ಸಮಾನುಗಳನ್ನ ತಗೊಂಡ್ ಬರ್ತೇನೆ.... ಗೊತ್ತಾಗಲಿಲ್ಲ ಅಂದ್ರೆ messanger ನಲ್ಲಿ local ಟೀಂ ನಲ್ಲಿ ಇರೋ ನನ್ನ ಸಹದ್ಯೋಗಿ ನ ಕೇಳಿ ತಗೊಂಡ್ ಬರ್ತೇನೆ.... ಒಟ್ಟಿನಲ್ಲಿ ಚೆನ್ನಾಗಿ ಒದ್ದಾಡ್ತಾ ಇದೇನೇ,,,:-)

ಇವಾಗ ಸ್ವಲ್ಪ ಪರವಾಗಿಲ್ಲ, ೧೦ ಡೇಸ್ ಗೆ ,, ಬದುಕುವ ಮಟ್ಟಿಗೆ ಸ್ಪಾನಿಶ್ ತಿಳ್ಕೊಂಡ್ ಇದೇನೇ... :-)

ಇಲ್ಲಿನ ಜನರ ತಿನ್ನೋ ರೀತಿ ಅಂತು ನಂಗೆ ವಿಚಿತ್ರ ವಾಗಿ ಇದೆ... ಏನ್ ನೋಡಿದರು ಚಿಕನ್, meat , ಬರಿ ಇದೆ ಇರುತ್ತೆ.... ಒಂದು ದಿನ lunch ಗೆ ಏನು ತಗೊಂಡ್ ಹೋಗಿರಲಿಲ್ಲ (ದಿನಗಳು ಏನಾದ್ರು ಮಾಡಿಕೊಂಡ್ ಅದನ್ನೇ ತಗೊಂಡ್ ಹೋಗ್ತೇನೆ ಲಂಡನ್ ನಲ್ಲಿ ಇದ್ದಾಗಲೂ ಹೇಗೆ ಮಾಡ್ತಾ ಇದ್ದದ್ದು) , ಸರಿ ಏನಾದ್ರು ಇಲ್ಲೇ ತಿನ್ನೋಣ ಅಂತ mac donald ಗೆ ಹೋಗಿ veg burger ಕೊಡಿ ಅಂದ್ರೆ ಅಂತೋದು ಇಲ್ಲವೆ ಇಲ್ಲ ಅಂತ ಹೇಳ್ಬೇಕ.... ಕರ್ಮ ಅನ್ಕೊಂಡ್ ವಾಪಾಸ್ ಬಂದೆ..... ನನ್ ಜೊತೆ ಇಲ್ಲಿಯ ಆಫೀಸ್ collegues ಬಂದಿದ್ರು ಅವರ ಬೇರೆ ಕಡೆ veg salad and burger ಕೊಡಿಸಿದರು ... ಅವೊತ್ತೆ ಲಾಸ್ಟ್,,, ಕಷ್ಟ ಅದ್ರು ಪರವಾಗಿಲ್ಲ , ಬೆಳಿಗ್ಗೆ ಬೇಗ ಎದ್ದು ಮರಿದೇ ನನ್ ಮದ್ಯಾನದ lunch ಬಾಕ್ಸ್ ನ ತಗೊಂಡ್ ಬರ್ತೇನೆ .

ಇಲ್ಲಿ ನನಗೆ ಆದ ಕೆಲವು ಹಾಸ್ಯದ ಗಟನೆಗಳನ್ನ ಹೇಳ್ಕೋಬೇಕು..

2nd ಡೇ, ನನ್ ಜೊತೆ ನನ್ ಆಫೀಸ್ ಕೊಲೆಗುಎ ಒಬ್ರು ಬಂದಿದ್ರು,, ಇಲ್ಲಿಯ Tube route ತೋರಿಸಿ, ಮನೆ ತನಕ ಬಿಟ್ಟು ಹೋದರು, ಸೊ ಹೀಗೂ ನನ್ನ ಅಪಾರ್ಟ್ಮೆಂಟ್ ವರೆಗೂ ಬಂದಿದ್ರಲ್ಲ ಒಳಗಡೆ ಬಂದು ಹೋಗಿ ಅಂತ invite ಮಾಡಿದೆ , ಬಂದ್ರು,,, ಏನಾದ್ರು ಕೊಡೋಣ ಅಂತ, ಕಾರದ ಅವಲಕ್ಕಿ ಕೊಟ್ಟೆ, (ನಮ್ಮ ಅತ್ತೆ ನನಗೆ ಅಂತ ಮಾಡಿ ಕೊಟ್ಟಿದ್ರು ) ಒಂದೇ ಒಂದು ಸ್ಪೂನ್ ತಿಂದಿದ್ದು ಅಸ್ಟೇ ಅಸಾಮಿ,,,, ಫುಲ್ ಬಾಯಿಬಡ್ಕೊಳಕ್ಕೆ ಸ್ಟಾರ್ಟ್ ಮಾಡಿದ... ನಾನ್ ಏನಪ್ಪಾ ಆಯಿತು ಅಂದ್ರೆ,,, ಅಸ್ತೊಂದ್ ಖಾರ ಅಂತೆ....ಒದ್ದಾಡ್ತಾ ಇದಾನೆ,,, ಒಂದು botel ನೀರು ಕುಡಿಸಿ ಕಳುಹಿಸಿದ್ದಯ್ತು . ಇಲ್ಲಿಯ ಜನ ಖಾರ ನೆ ತಿನ್ನೋಲ್ವಂತೆ,,, ಎಲ್ಲದಕ್ಕೂ ಸ್ವೀಟ್ ಇರಬೇಕಂತೆ....

ಇನ್ನೊಂದ್ ಸಲ, ಮೊದಲನೇ ದಿನ ಆಫೀಸ್ ಗೆ ಹೊರಡಬೇಕು,,,,, compliments ಅಂತ ಬ್ರೇಕ್ ಫಾಸ್ಟ್ coupans ಕೊಟ್ಟಿದಾರೆ, (ಅಪಾರ್ಟ್ಮೆಂಟ್ ಪಕ್ಕದಲ್ಲೇ ಇರೋ ಹೋಟೆಲ್ ನಲ್ಲಿ ಡೈಲಿ ಬ್ರೇಕ್ ಫಾಸ್ಟ್ ಗೆ ಅಂತ,,, ಇದರಲ್ಲಿ ಒಂದು ಕಾಫಿ , orange juice , ಮತ್ತೆ ಎರಡು ಸ್ವೀಟ್ ಆಗಿ ಇರೋ bun ಕೊಡ್ತಾರೆ ) ಹೋಟೆಲ್ ಗೆ ಹೋಗಿ coupan ಕೊಟ್ಟೆ , ಅವಳು ಏನೋ ಕೇಳಿದಳು ಸ್ಪಾನಿಶ್ ನಲ್ಲಿ... ನಾನು ಬರಿ ಕಾಫಿ ಅಂದೇ,,,, ಅದಕ್ಕೆ ಒಂದು ದೊಡ್ಡ ಕಪ್ ನಲ್ಲಿ ಕಾಫಿ ಮತ್ತೆ ಇನ್ನೊಂದರಲ್ಲಿ ಫುಲ್ ಹಾಲು ತಂದು ಕೊಟ್ಟಳು,,,,, ನನಗೆ ತಲೆ ಕೆಟ್ಟು ಹೋಯ್ತು,,,, ಎರಡರಲ್ಲೂ ಫುಲ್ ಇದೆ,,, ಹೇಗೆ ಮಿಕ್ಸ್ ಮಾಡಿಕೊಂಡ್ ಕುಡಿಯೋದು ಅಂತ,,, ಅಕ್ಕ ಪಕ್ಕ ನೋಡಿದೆ ಅಲ್ಲಿರುವರೊಬ್ಬರು ಹಾಗೆ ಕುಡಿತ ಇದ್ರೂ,,,, ಸರಿ ನನ್ ಕರ್ಮ ಇನ್ನೇನ್ ಮಾಡೋದು ಅಂತ,,, ಬ್ಲಾಕ್ ಕಾಫಿ ನೆ ಸ್ವಲ್ಪ ಕುಡಿದು , ಇನ್ನೊಂದ್ ಸ್ವಲ್ಪ ಹಾಲು ಕುಡಿತ , ಕಾಫಿ ಸ್ವಲ್ಪ ಕಮ್ಮಿ ಆದಾಗ ಹಾಲನ್ನ ಮಿಕ್ಸ್ ಮಾಡಿಕೊಂಡ್ ಕುಡಿದೆ...
ಎರಡನೆ ದಿನಾನು ಹೇಗೆ ಆಯಿತು.... ಆಮೇಲೆ ಆಫೀಸ್ ಗೆ ಹೋಗಿ ಕೇಳಿದೆ ಇಲ್ಲಿ ನೀವು ಕಾಫಿ ನ ಹೀಗೆ ಕುಡಿಯೋದ,,, ಅಂತ,,, ಅವಾಗ ಹೇಳಿದ್ರು ಕೆಲವರು ಕಾಫಿ ಹಾಗೆ ಬೇಕು ಅಂತ ಕುಡಿತಾರೆ,, mostly ಅಲ್ಲಿರುವವಳು ನಿನ್ನ coffee con leche (ಕಾಫಿ ಮತ್ತೆ ಹಾಲು) ಬೇಕ ಅಂತ ಕೇಳಿರಬೇಕು ಅಂತ,,, ಸೊ next ಡೇ ಇಂದ ನಾನೆ coffee con leche ಅಂತ ಹೇಳಿ,, ನೀಟ್ ಆಗಿ ನಮ್ಮ ತರಾನೆ ಕಾಫಿ ಮಾಡಿಸಿಕೊಂಡ್ ಕುಡಿತ ಇದ್ದೇನೆ....
 
ಇಲ್ಲಿ ತೆಗೆದಿರುವ ಫೋಟೊಗಳನ್ನ ನನ್ನ ಪಿಕಾಸ ಆಲ್ಬಮ್ ನಲ್ಲಿ ಹಾಕಿದ್ದೇನೆ,,, ನೋಡಿ ....
http://picasaweb.google.com/guru.prasadkr/ArgentainaBuenosAiresCityViewNight?feat=directlink
 

 ನನ್ನ ಅಪಾರ್ಟ್ಮೆಂಟ್ ಹತ್ರ ಇರೋ ಪಾರ್ಕ್

 ನಾನಿರೋ ಅಪಾರ್ಟ್ಮೆಂಟ್ ಮುಂದಿನ ರೋಡ್


 9 De Juilo ರೋಡ್






12 comments:

  1. ಗುರು, ಎಂತಾ ಪರಿಸ್ಥಿತಿ ನಿಮಗೆ ಹಹಹ... ಹೇಗೋ ಅಡಿಗೆ ಮಾಡಿಕೊಳ್ಳುತ್ತಿರೋದಕ್ಕೆ ಬಚಾವ್ ಇಲ್ಲಾ ಅಂದ್ರೆ ಊರಿಗೆ ಹೋಗೋಷ್ಟರಲ್ಲಿ ೧೦ಕೆಜಿ ಕಮ್ಮಿ ಹಾಗುತ್ತಿದ್ದರೇನೋ... ಹಹಹ.. ಜೋಕ್ ಚೆನ್ನಾಗಿವೆ... ಪೋಟೋಗಳು ಅಷ್ಟೇ ಚೆನ್ನಾಗಿವೆ.... ಆದಷ್ಟು ಬೇಗ ಪ್ರೀತಿಯ ಅಮ್ಮ, ಮುದ್ದಿನ ಹೆಂಡತಿಯನ್ನು ಸೇರಿ...

    ReplyDelete
  2. chennaghi edhe guru nimma dinachari mathe nimma experience...ella kadye nu ondhu ondhu thara experience agtha iruthe..alliya jeevana, jana, alli bashe cuture nodtha iroshtrolli namme time agogiruthe vapas india ghe barodhuke...but it is always good to know diff languages and cultures unless and until u r interested..hmmm..happy days ahead.. :)

    ReplyDelete
  3. ಗುರು, ನಿಮ್ಮ ಅನುಭವ ಚೆನ್ನಾಗಿದೆ. ಅಲ್ಲಿನ ಅನುಭವಗಳ ಬಗ್ಗೆ ಇನ್ನಷ್ಟು ಬರೆಯಿರಿ, ಬೇಗ ಬನ್ನಿ.

    ReplyDelete
  4. ಹ ಹ. ಇದೆಲ್ಲಾ ಪಾಡುಗಳ ನಡುವೆಯೂ ಬೇರೆ ಬೇರೆ ದೇಶಗಳಲ್ಲಿನ ಬೇರೆ ಜನರ ಜೊತೆಗಿನ ಅನುಭವಗಳು ಒಂಥರಾ ಚಂದ. ಆಮೇಲೆ ಅದನ್ನೆಲ್ಲಾ ಹೇಳ್ಕೊಂಡು ನಗಾಡೋಕೆ ಸಖತ್ತಾಗಿರತ್ತೆ.

    ಇನ್ನೂ ಒಂದಿಷ್ಟು ವಿವರಗಳನ್ನು ಕೊಡಿ ಮುಂದೆ.

    ReplyDelete
  5. ಹೌದು ಮನಸು,,, ಇಲ್ಲ ಅಂದಿದ್ರೆ ನನ್ ಕತೆ ಅಸ್ಟೇ...... ಹಾಂ ನಂಗು ಯಾವಾಗ ಹೋಗಿ ಅವರನ್ನ ನೋಡ್ತೇನೋ ಅಂತ ಅನ್ನಿಸಿದೆ

    ReplyDelete
  6. yes ಪ್ರಸಾದ್ , ಇದೊಂದ್ ತರ ವಿಚಿತ್ರ ಅನುಭವ . ಚೆನ್ನಾಗಿ ಇರುತ್ತೆ ಇಲ್ಲಿಯ experiance

    ReplyDelete
  7. ಖಂಡಿತ ಪರಾಂಜಪೆ,, ಟೈಮ್ ಸಿಕ್ಕಾಗಲೆಲ್ಲ ಇಲ್ಲಿನ ಅನುಭವದ ಲೇಖನಗಳನ್ನ ಬರೆದು ಹಂಚಿಕೊಳ್ಳುತ್ತೇನೆ ..... ಅದಸ್ಟು ಬೇಗ ಇಂಡಿಯಾ ಗೆ ಬರಬೇಕು,,, ನನ್ನ ಹೆಂಡತಿ,,,ಮತ್ತೆ ಅಮ್ಮ ಕಾಯ್ತಾ ಇದ್ದಾರೆ,,,

    ReplyDelete
  8. ಹೌದು ವಿ ರ ಹೇ, ನೀವು ಹೇಳುವುದು ಸರಿ,,, ಬೇರೆ ಭಾಷೆ, ಬೇರೆ ಜನ ಇವಾಗ cluture ,,, ಇದನ್ನೆಲ್ಲಾ ಒಂದು ರೀತಿ ಕುಷಿ ಕೊಡೊ ಅನುಭವ....ಚೆನ್ನಾಗಿ ಇರುತ್ತೆ.

    ReplyDelete
  9. ಗುರು,

    ಸಕ್ಕತ್ ಅನುಭವ ಅರ್ಜೆಂಟಾನದ್ದು ಅನ್ನಿಸುತ್ತೆ. ಓದಿ ಖುಷಿಯಾಯ್ತು. ಅಲ್ಲಿನ ಹಾಸ್ಯ ಸನ್ನಿವೇಶಗಳು ಸಕ್ಕತ್ ಆಗಿವೆ. ಅವು ನಿತ್ಯ ಆಗುತ್ತಿರಬೇಕು. ಮತ್ತಷ್ಟು ಬರೆಯಿರಿ..
    ಮತ್ತೆ ಬಿಡುವಾದರೆ ನನ್ನ ಛಾಯಾಕನ್ನಡಿಯಲ್ಲಿ ಇತ್ತೀಚೆಗೆ ಬರೆದಿರುವ "ಪೆಂಟಟಾಮಿ ಬಗ್" ಜೀವನ ಶೈಲಿಯನ್ನು ಒಮ್ಮೆ ಓದಿ ಖಂಡಿತ ಹೊಸ ಅನುಭವ ಕೊಡಬಹುದು.

    ReplyDelete
  10. nimma anubhavagalu muda kottitu..:)

    chandada photogalu..

    sankramanada haardhika shubhaashayagalu..

    ReplyDelete
  11. tumbaa sakat anubhava nimdu ahhaha

    desha bitre desha nenpagatte tumba alvaa

    ReplyDelete
  12. ಗುರು..ಬಹಳ ಚನಾಗಿವೆ ಫೋಟೋಗಳು..ನಿಮ್ಮ ಪರದಾಟ ಹಹಹ,,,ನನಗೆ ನನ್ನ ಥಾಯ್ಲಾಂಡ್ ಪ್ರವಾಸ ನೆನಪಾಯ್ತು..ವೆಜ್ ಸೂಪ್ ನಲ್ಲಿ ಪೊರ್ಕ್ ಮಿಕ್ಸ್ ಮಾಡಿದ್ರು ..ಕೇಳಿದ್ರೆ..ಅದು ವೆಜ್ ಸೂಪ್ ಬಟ್ ಬೇಸಿಸ್ ಪೋರ್ಕ್ ಅಂತೆ...ಹಹಹ..
    ನಿಮ್ಮ ಜೊತೆ ನಮ್ಮನ್ನೂ ಅರ್ಜೆಂಟಾನಾ ಯಾತ್ರೆಗೆ ಕರೆದೊಯ್ದಿರಿ..ಗುಡ್

    ReplyDelete