ನನ್ನಾಸೆ,,,,
ಮುಂಜಾವಿನ ಮಂಜಿನ ಬಿಂದುಗಳ ಜೊತೆ
ಆಟವಾಡುವ ಅಸೆ .....!!!
ಕೊಡಚಾದ್ರಿ ಬೆಟ್ಟದ ಮೇಲಿನ ಬಿಳಿ ಮೇಘಗಳ
ಜೊತೆ ಹಾರಾಡುವಾಸೆ !!!!
ಸಹ್ಯಾದ್ರಿಯ ಹಸಿರು ವನಗಳ ನಡುವೆ...
ಸಣ್ಣಗೆ ಬೀಳುವ ಮಳೆಯ ಜೊತೆ ಜೊತೆಯಲಿ...
ನಲಿದಾಡುವಾಸೆ.......!!!
ಚುಮು ಚುಮು ಚಳಿಗಾಲದಲ್ಲಿ
ಮುನ್ನಾರಿನ ಬೆಟ್ಟದ ತುದಿಯಲ್ಲಿ
ದಟ್ಟ ಮಂಜಿನ ನಡುವಿನಲ್ಲಿ...
ನಡೆದಾಡಿಕೊಂಡು ಚಾ ಕುಡಿಯುವಾಸೆ....!!!!
ಆಗುಂಬೆಯ ಸವಿ ಸಂಜೆಯಲ್ಲಿ....
ಮುಳುಗುತಿರುವ ಕೆಂಪು ಸೂರ್ಯನನ್ನು
ದೂರದಿಂದಲೇ ಮುಟ್ಟುವ ಅಸೆ.....!!!!
ಜಟಿ ಜಟಿ ಸಣ್ಣನೆ ಮಳೆಯ ನಡುವೆ
ಮಲೆನಾಡ ಪ್ರಕೃತಿಯ ಮಡಿಲಲ್ಲಿ
ಒಬ್ಬನೇ ಡ್ರೈವ್ ಮಾಡಿಕೊಂಡು ಹೋಗುವಾಸೆ ....!!!!